Kannada

ಚಿನ್ನ ಚಿನ್ನ ಆಸೆ

Writer DP! Bharavi Bharadwaja 25 Apr 20 4 Views
ನಿನ್ನ ಜೀವನದ ಅವಿಭಾಜ್ಯ ಅಂಗವಾಗಿರುವ ಆಸೆ
ನಿನ್ನ ಜೀವನದ ಪುಟದಲ್ಲಿ ಒಂದೊಳ್ಳೆ ಪುಟವಾಗುವ ಆಸೆ
ನನ್ನನು ನಿನ್ನಲ್ಲಿ ಹುಡುಕುವ ಆಸೆ
ನಾನು ಎಲ್ಲರಂತಲ್ಲ ಎಂದು ಹೇಳುವ ಆಸೆ
ನಿನ್ನೊಂದಿಗೆ ಒಳ್ಳೆ ಗೆಳೆಯರ ಹಾಗೆ ಜೀವನ ಮಾಡುವ ಆಸೆ
ನಿನ್ನ ಜೊತೆ ಭಾರತ ಪರ್ಯಟನೆ ಮಾಡುವ ಆಸೆ
ನನ್ನ ಒಂದಷ್ಟು ಮರೆಯಲಾಗದ ಪ್ರವಾಸವನ್ನು ನಿನ್ನ ಜೊತೆ ಮಾಡುವ ಆಸೆ
ಹಾಗೆಯೇ ನಿನ್ನ ಆಸೆಗಳನ್ನು ಕೇಳುವ ಆಸೆ, ನಿನ್ನ ಆಸೆಗಳನ್ನು ಕೇಳುವ ಆಸೆ

:- ಭಾರವಿ ಭಾರದ್ವಾಜ
0
Reading under T&C