Kannada

ಮಡಿಕೇರಿ ಪ‌‌್ರವಾಸ

Writer DP! pooja Puranik T M 05 Oct 17 11 Views
ಆಹಾ ಮಡಿಕೇರಿ ಪ್ರವಾಸ
 ಕುಡಿದಷ್ಟೇ ಕುಶಿಯಾಯ್ತು ಗಸಗಸೆ ಪಾಯಸ 
ಆದರೂ ಎಲ್ಲರಿಗೂ ಕೊಂಚ ಆಯಾಸ 
ಮನಸ್ಸಿಗಂತು ಬಾರಿ ಉಲ್ಲಾಸ


 ತೋಟದ ಮನೆ ಊಟ ತುಂಬಾ ರುಚಿ 
ದೇವರು ಸೃಷ್ಟಿಸಿದನು ಆ ಪ್ರದೇಶ ಹಸಿರು ಬಣ್ಣ ಹಚ್ಚಿ 
ಪ್ರಕೃತಿಯಲ್ಲಿ ಹಾರಾಡಬೇಕೆಂದು ಅನಿಸುವುದು ರೆಕ್ಕೆ ಬಿಚ್ಚಿ 


ದುಬಾರೆಯಲ್ಲಿ ನೋಡಬೇಕು ಆನೆಗಳ ದಂಡು 
ಹಾಗೆ ಸಂತೋಷಪಟ್ಟೆವು  ದೋಣಿಯಲ್ಲಿ  ವಿಹರಿಸಿ ಕೊಂಡು 
ವಾಪಸಾದೆವು ಚಿಕ್ಲಿ ಹೊಳೆ ಸೊಬಗನ್ನು ನೋಡಿಕೊಂಡು 


ನಂತರ ಬಂದೆವು ಅಬ್ಬಿ ಜಲಪಾತದ ತನಕ 
ಮಳೆ ಮತ್ತು ಜನಸಾಗರ ಕಂಡು ಕೊಂಚ ಆತಂಕ 
ಆದರೂ ಭೋರ್ಗರೆಯುವ ಜಲಧಾರೆ ನೋಡಿ ಅರಳಿತು ಎಲ್ಲರ ಮುಖ 


ಮುಂದಿನ ದಿನ ನೋಡಿದೆವು ರಾಜಾ ಸೀಟ್ ಪ್ರಕೃತಿ ಮಾಯೆ
ಎಲ್ಲರ ಮುಖದಲ್ಲಿ ತುಂಬಿತು ಸಂತಸದ ಛಾಯೆ 
ಅಲ್ಲಿಂದ ಹೊರಟೆವು ತೆಗೆದುಕೊಂಡು ಓಂಕಾರೇಶ್ವರ ದಯೆ


 ಎತ್ತರಕ್ಕೆ ಏರಿ ನೋಡಬೇಕು ತಲಕಾವೇರಿಯ ವಿಸ್ಮಯ 
ಮಂಜಿನ ಮೋಡದ ಅಡಿಯಲ್ಲಿ ಸಾಗಿ ನಮ್ಮೆಲ್ಲರ ತನುವು ತನ್ಮಯ
 ಕೆಳಗೆ ನೆಲಸಿರುವ ಭಗಂಡೇಶ್ವರ ನಿಜಕ್ಕೂ ಪೂಜನೀಯ
1
Reading under T&C