Kannada

೩೭೭ರ ಹೆದ್ದಾರಿ

Writer DP! Unknown 23 May 20 3 Views
ಸೂರ್ಯನ ಉರಿ ಬಿಸಿಲಿನ ಹಾಗೆ
ನಿನ್ನ ಕಣ್ಣೋಟ ನನ್ನ ತಾಕಿದೆ
ತಂಗಾಳಿ ಬೀಸಿದಂತೆ ನಿನ್ನಿರವು ನನ್ನ ಸೋಕಿದೆ

ಚಳಿಗಾಲದ ತಣ್ಣನೆಯ ಗಾಳಿಯು ತಾಕಿದ ಹಾಗೆ  ನಿನ್ನ ಆ ತಣ್ಣನೆಯ ಮೃದುವಾದ ಕೈಯು ತಾಕಿದಂತಿದೆ,
ಮಳೆಗಾಲದಲ್ಲಿ ಹಾರಿ ಬರುವ ಹಕ್ಕಿಯ ಹಾಗೆ  ನಿನ್ನ ನೆನಪುಗಳು ಒಮ್ಮೊಮ್ಮೆ ಹಾರಿ ಬಂದಂತಿದೆ,
ಇವತ್ತೇನೋ ನಿನಗೆ ಹೇಳಬೇಕೆಂಬ ಆಸೆ ಉಕ್ಕುಕ್ಕಿ ಬರುತ್ತಿದ್ದರು  ಈ ಒಲವೋ, ವಿರಹವೋ ನನ್ನನ್ನು ಬಂಧಿ ಮಾಡಿದೆ,
ನಿನ್ನ ತುಂಟ ನಗುವಿನ ಮುಖವು ನೋಡುತ್ತಿದ್ದ ನನಗೆ  ಆ ನಿನ್ನ ಬಿಸಿ ಚುಂಬನದ ಭಾವವು ಬೆನ್ನ ಹಿಂದೆಯೇ ಭಾಸವಾದಂತಿದೆ,
ನಿನ್ನ ಕೈಯನ್ನೊಮ್ಮೆ ಹಿಡಿದು ನಡೆದರೂ ಜನ ಕೇಳುತ್ತಿರುತ್ತಾರೆ  ನಿಮ್ಮದು ಒಂದು ಪ್ರೀತಿಯೇ? ನಿಮ್ಮದು ಒಂದು ಜೋಡಿಯೇ ? 
ನಿನ್ನ ಪ್ರೀತಿಯಲ್ಲಿ ಬಂಧಿಯಾದ ನನಗೆ ಆಕರ್ಷಣೆಯೊಂದೇ ಅಲ್ಲ  ಆಕಾರವಿಲ್ಲದ ಬದುಕಿಗೆ, ಆಯಾಸಕಾಂತದಂತಹ ನಿನ್ನೊಲವು, ನಿಲುವು ಕೊಡಬಲ್ಲುದು.
- ಸಂಗಮೇಶ ಸಜ್ಜನ
0
Reading under T&C