Kannada

ಮರೆಯಲಾಗದ ನಿನ್ನ ಸಾಂಗತ್ಯದ ನೆನಪುಗಳು

Writer DP! Harithsa Kshetrapal 08 Apr 20 13 Views
ಮರೆಯಲಾಗದ ನಿನ್ನ ಸಾಂಗತ್ಯದ ನೆನಪುಗಳು 
ಮರುಕಳಿಸಿ ಬಂದು ಬಡಿಯುತ್ತಿವೆ ಹೃದಯದ ಬಾಗಿಲುಗಳ 
ನೀ ಇರದಿದ್ದರೂ ಇರುವಂತಿರುವ ಆ ಸುಂದರ ಭಾವಗಳು
ಕಲಕುತಿವೆ ಕಣಕಣದಲ್ಲೂ ಬೆರೆತು ಜೀವದ ನಾಡಿಗಳ...

ನೀ ನನಗೆಂದು ಉಳಿಸಿಹೋದ ಸವಿನೆನಪುಗಳ ಚಿಲುಮೆ ದಾಹ ನೀಗಿಸುವ ಅಮೃತವಾಗಿ ತೋರಿವೆ ಒಲುಮೆ.. ನೀನಾಡಿದ ಒಂದೊಂದು ಪಿಸುಮಾತುಗಳು ಆಗಿವೆ ಕವಿತೆಗಳ ಪ್ರತಿಮೆ  ಅದ ನೋಡಿ ನೋಡಿ ಸದ್ದಿಲದೆ ಹೊತ್ತಿದೆ ಒಂಟಿತನದ ಕುಲುಮೆ..
ಎಲ್ಲೆ ಇಲ್ಲದ ಆಕಾಶದಂತ ನಿನ್ನ ಅನಂತ ನೆನಪಿನ ಛಾವಣಿಯಲ್ಲಿ ಚಾದರವ ಹೊದ್ದರೂ ಮನವು ನಡುಗುತಿದೆ ಏಕಾಂತದ ಛಳಿಯಲ್ಲಿ ನಿನ್ನ ನಗುವಿನ ಹೊಂಬೆಳಕು ಸದಾ ಹೊಳೆವಾಗ ನನ್ನ ಕಣ್ಣಲ್ಲಿ  ಎಂಥಾ ಶೀತಗಾಳಿಯನ್ನೂ ಅನುಭವಿಸುವೆ ಖುಷಿಯಾಗಿ ಬಾಳಲ್ಲಿ...

1
Reading under T&C