Kannada

ಅಮ್ಮ

Writer DP! Sushmitha A Swamy 09 May 20 2 Views

 ಅಮ್ಮ.....

ಮಗುವಿನ ತೊದಲು ನುಡಿ ಅಮ್ಮ
ಮಗುವಿನ ಮೊದಲು ನುಡಿ ಅಮ್ಮ
ತೊದಲು ನುಡಿಯಲ್ಲೂ ಚಂದ ಅವಳಮ್ಮ

ಆಕೆಯ ಗೆಲುವು ಮಗುವಲ್ಲಿ
 ಆಕೆಯ ನಲಿವು ಮಗುವಲ್ಲಿ
ಆಕೆಯ ಸರ್ವಸ್ವವೂ ಮಗುವಿನ ಮೊಗದಲ್ಲಿ

ಪ್ರೀತಿಗೆ ಮಿತಿಯಿಲ್ಲ ತ್ಯಾಗಕ್ಕೆ ಸಾಟಿಯಿಲ್ಲ
ಅಕೆಯ ಕೈ ರುಚಿ ಎಂದು ಕ್ಷೀಣಿಸೊಲ್ಲ 
ಅವಳ ಕೈ ತುತ್ತಿಗೆ ಸೋಲದವರಿಲ್ಲ

ನೊಂದ ಕಣ್ಣಲ್ಲಿ ಬೆಂದ ಮನದಲ್ಲಿ
ಮೂಡುವ ಆಶಾಕಿರಣ.....ಅಮ್ಮ
ಅಮ್ಮನ ಬೆಲೆ ಅರಿಯುವುದು, 
                                ಅಮ್ಮನಾದಲ್ಲಿ !!!


0
Reading under T&C