Kannada

ಅವಳು ಮತ್ತು ನೆರಳು

Writer DP! Adithya S K 14 Apr 20 5 Views
ಅವಳು ಮತ್ತು ನೆರಳು

ಹೇ ಪ್ರೀತಿ, ನನ್ನದೊಂದು ವಿನಂತಿ, ಕಲಿಸಿಕೊಡು ಗೆಳತಿ, ನಿನ್ನ ಮರೆವ ರೀತಿ...
ನರಳಿದ ನೆರಳು ನನ್ನ ಹಿಂದೆ ಬಂದರೆ, ಕದಡಿದ ಬಾಳು ಬಣ್ಣ ಕಳೆದು ಕೊಂಡರೆ, ಅಯ್ಯೋ ಅನ್ನದ ಈ ಬೀದಿ ದೀಪ, ನೆರಳ ಒರೆಸಿ ನಿರಾಳಿಸಲಾರ ಪಾಪ,
ಹೇ ಪ್ರೀತಿ, ನನ್ನದೊಂದು ವಿನಂತಿ, ಕಲಿಸಿಕೊಡು ಗೆಳತಿ, ನಿನ್ನ ಮರೆವ ರೀತಿ...
ಕಂಗಾಲಿನ ತಂಗಾಳಿ ಅಪ್ಪುಗೆಯ ನೆನಪು, ಮುಂಗಾರಿನ ಮಳೆಯಲಿ ಬಿಸಿಉಸಿರ ಕಂಪು, ಎಂದು ಮರೆಸದು ಈ ಹೊಂಗೆ ಮರವು, ನಿನ್ನ ಬಿಳ್ಕೊಡುಗೆಯು ನಾ ಬೇಡದ ವರವು...
ಹೇ ಪ್ರೀತಿ, ನನ್ನದೊಂದು ವಿನಂತಿ, ಕಲಿಸಿಕೊಡು ಗೆಳತಿ, ನಿನ್ನ ಮರೆವ ರೀತಿ...
ಲಜ್ಜೆಯ ಹೆಜ್ಜೆ ಗುರುತು ಇನ್ನು ಮಾಸಿಲ್ಲ, ಗೆಜ್ಜೆಯ ಸಪ್ಪಳ ಈ ರಸ್ತೆ ಮರೆತಿಲ್ಲ, ನಿನ್ನ ಮೊದಲ ಸ್ಪರ್ಶಕ್ಕೆ ಸಾಕ್ಷಿನೇ ಚಂದಿರ, ನನ್ನ ಮೊದಲ ಪ್ರೀತಿಗೆ ಉಳಿದದ್ದೆ ಕಣ್ಣೀರ...
ಹೇ ಪ್ರೀತಿ, ಇದ್ಯಾವ ನೀತಿ, ಕಾಣದ ನನ್ನೀ ಸ್ಥಿತಿ, ನಿನ್ನ ನೆನೆಯುವೆ ದಿನಕೊಂದು ಸರತಿ...                               - ಇಂತಿ ನಿಮ್ಮ ಆದಿ
0
Reading under T&C