Kannada

ಕನಸಲ್ಲಿ ಹುಟ್ಟ ಪ್ರೀತಿ

Writer DP! ಧ್ರುವ 31 Jan 17 9 Views
ಹುಡುಗಿ ಒಬ್ಬಳ ಕಣ್ಣಿಗೆ ಕಟ್ಟಿದರು ಕಣ್ಬಟ್ಟೆ
ಅವಳ ಕನಸ ಕಾಣುವ ಯೋಗ್ಯತೆಯೇ ಇಲ್ಲದೆ ಬೆಳೆದು ದೊಡ್ಡಾಕೆ ಆದರು ಬೆಳೆದಿದೆ ಆ ಬಟ್ಟೆ ಮೈಮೇಲೆ ಅವರ ಇವರ ಹೆಸರನ್ನ ಬಚ್ಚಿಟ್ಟಿ.
ಯಾರೆ ನೀ, ಯಾರ ಕಣ್ಣಿಗು ಕಾಣದ‌ ಮನಸೇ...?
ತಾಳ್ಮೆಗೆ ಇನ್ನೊಂದು ಹೆಸರೆ ಇವಳಿಗೆ ಇದ್ದರು ಇವಳ ನಗುವ ಉಳಿಸೋ ತಾಳ್ಮೆಯನ್ನ ಕೊಂದರು ಸಮಾಜ ಎಂಬುವ ಮರಳು ರಾಜ್ಯವನ್ನೆ ಕಟ್ಟ್ಯಾರು ರಕ್ಷಣೆ ಮಾಡದ ಕಠಿಣ ಕಾರಗ್ರಹ ಮಾಡ್ಯಾರು.
ಯಾರೆ ನೀ, ಯಾರ ಕಿವಿಗು ಕೇಳದ ಮೌನವೇ...?
ಸುಳ್ಳಿನ ಕೋಟೆಗೆ ನಂಬಿಕೆ ಎಂಬ ಹೆಸರಿಟ್ಯಾರೆ ಕಣ್ಬಟ್ಟೆ ಕಿತ್ತೊಯ್ದು ನೊಡಲೇ ಅವ್ವ ನಿನ್ನ ಸೃಷ್ಟಿಯ ಹೆಣ್ಣಿನ ಕರಳ ಅರ್ಥವ ನಾನು ಅರಿತಿಹೇನೆ ಕಾರಣ ಕಣ್ಬಟ್ಟೆ ಮಾಡದೆ ಲಿಂಗ ಭೇದವನ್ನ.
ಯಾರೆ ನೀ, ನನ್ನ ಬಾಳಿನ ಆದಿಯ ಅರ್ಥವೇ...?
ನಿನ್ನ ಕಣ್ಣ ತೆರೆಯಲು‌ ಸಹನೆ‌ ಹೊತ್ತಿರುವೆ ನನ್ನ ಕೈಯ ಹಿಡಿಯಲು ನಂಬಿಕೆ ಕಾಪಾಡಿಕೊ ಕಣ್ಣಲಿ ಭಾವ ಮನಸಲಿ ಸೌಂದರ್ಯ ಕಾಣುವೆ ಪ್ರೀತಿಗೆ ಹುಟ್ಟು ಕನಸಲಿ ನನಗೆ, ಕಣ್ಣಲಲ್ಲವೇ.....!
ಯಾರೆ ನೀ, ನನ್ನ ಪ್ರಶ್ನೆಗೆ‌ ಉತ್ತರವೇ...?
0
Reading under T&C