Kannada

ಇನ್ನೊಮ್ಮೆ ಬರುವೆಯ...

Writer DP! ಧ್ರುವ 27 Jun 17 4 Views
ಉದುರಿದ ಎಲೆಗಳ ಅಡಿ ನುಸುಳಿ
ನನ್ನ ಕಣ್ಣ ರೆಪ್ಪೆಗಳ ಬಳಿ ಮಾತಾಡಿ
ಎದುರಿಗೆ ಬಂದವಳ ಅಪ್ಪಿ ಮುದ್ದಾಡಿ
ಗಾಳಿಮಾತು ವಾಪಸ್ಸಾಗಿದೆ ಒಂದು ಕ್ಷಣದಲ್ಲಿ.

ಇನ್ನೊಮ್ಮೆ ಬರುವೆಯ... ಬಂದು ನನ್ನ ಮನವ ವಾಪಸ್ಸು ಮಾಡುವೆಯಾ?
ಬೇಗನೆ ಬಂದಿತೇನೊ ಮುಸ್ಸಂಜೆ ಕಾಡಿದೆ ಅವಳದೆ ರೂಪ ಕಣ್ಣಲ್ಲೆ ಮಳೆ ಮೋಡದ ಹುರುಪು ಅವಳದ್ದು ಭಾವವೆಲ್ಲ ಹನಿಯಾಗಿ ಕೂಡಿಟ್ಟಿರುವಳು.
ಇನ್ನೊಮ್ಮೆ ಬರುವೆಯ... ಬಂದು ನನ್ನ ಮನವ ವಾಪಸ್ಸು ಮಾಡುವೆಯಾ?
ಕತ್ತಲು ಕೇಳಿದೆ ನನ್ನ ಅನುಮತಿ ಬಂದರೆ ಬಾ ಅಡ್ಡಿಯಿಲ್ಲ ಇಂದು ಸಿಕ್ಕಿಹಳು ಒಬ್ಬಳು ಚಂದಿರನಂತೆ ಆಗಿದೆ ಬದುಕು ಬೆಳದಿಂಗಳ ಆಕಾಶದಂತೆ.
ಇನ್ನೊಮ್ಮೆ ಬರುವೆಯ... ಬಂದು ನಿನ್ನ ಮನವ ನನ್ನಲ್ಲಿ ಬಚ್ಚಿಡುವೆಯಾ?
0
Reading under T&C