Kannada

ಮೊದಲ ‌ದೋಸೆ

Writer DP! ಧ್ರುವ 15 Mar 17 8 Views
ಡೊಂಕಾದ ದಾರೀಲಿ ನೆಟ್ಟಗೆ ನಡೆಯುತ್ತಿದ್ದೆ
ಕಾಲಿಗೆ ಕಾಲ್ಕೊಟ್ಟು ಬೀಳಿಸಿತು ದಪ್ಪನೆ‌ ಕಲ್ಲೊಂದು ಕಿತ್ತಿತು ಒಲಿಸಿದ ಹೊಸಾ ಚಪ್ಪಲಿ ತಟ್ಟನೆ ಕ್ಷೇಮ-ಸೂಜಿ ಸಿಗುಸಿ, ಜೀವನವೇ ಕಿತ್ತೋಗಿರಿವುದು‌ ಎಂದು ಮುಂದೋದೆ.
ದಾರೀಲಿ ಸಿಕ್ಕರು ಊರಿನ ಗೌಡರು ನಮಸ್ಕಾರ ಹಾಕ್ಲಿಲ್ಲ ಎಂದು ದುರುಗುಟ್ಟರು ಇನ್ನೂ ಏಳು ಜನ್ಮಕ್ಕು ಮರೆಯೊಲ್ಲ ಎಂಬ ದೃಷ್ಟಿಯಿಂದ ಮೂಗ ಅರಳಿಸಿಕೊಂಡೇ ಹೋದರು.
ಎಲ್ಲರು ನನಗಾಗಿಯೆ ಕಾಯುತ್ತಿದ್ದರು ಹೊಟ್ಟೆಗೆ ಅನ್ನ ಬಿದ್ದು ಎಷ್ಟೋ ದಿನಗಳಾಗಿದೆಯೋ‌ ಎಂಬಂತೆ ಹೋಟೆಲ್ ಒಳಗೆ ಕಾಲಿಟ್ಟು, ಹೆಗಲಿಗೆ ಅಂಗಿ ಒಂದ ಏರಿಸಿದೆ ಕಾದಿದ್ದ ಹೆಂಚಿನ ಮೇಲೆ ನೀರ ಹಾಕಿ, ಪೊರುಕೆ ಇಂದ ಉಜ್ಜಿ ಹಾಕಿಯೆ ಬಿಟ್ಟೆ ಆ ದಿನದ ಮೊದಲ ದೋಸೆ.
ಒಂದಾದ ಮೆಲೊಂದು ಉಯ್ಯುತ್ತಲೆ ಅರ್ಧ ದಿನ ಮುಗುಸಿದೆ ದೇವರಿಗೆಂದು ಎತ್ತಿಟ್ಟ ಮೊದಲ ದೋಸೆ ಹೊರ ತಂದೆ ನನ್ನ ನೋಡಿ ಪ್ರೀತಿಯಿಂದ ಬಂದ ನಾಯಿಗೆ ಹಾಕಿದೆ ದೇವರಿಗೆಂದು ಎತ್ತಿಟ್ಟ ಮೊದಲ ದೋಸೆ.
0
Reading under T&C