Kannada

ಮತ್ತೆ ಮತ್ತೆ ಮನ

Writer DP! Chethan Kumar N 21 Jan 16 40 Views
ಮತ್ತೆ ಮತ್ತೆ ಅದೇ ಕಣ್ಣೀರು ಸುರಿಯುತ್ತಿದೆ 
ಎಲ್ಲ ಕಷ್ಟ ನಷ್ಟಕ್ಕೂ, ನೋವು ನಲಿವಿಗೂ 
ಮತ್ತದೇ ಮನಸ್ಸು ಹೇಳುತಿದೆ 
ಈ ಬಾರಿಯೂ ನೀ ಸೋತಿಯೆಹೆಂದು

ದಡದ ಮರಳ ಮೇಲಿನ ಹೆಜ್ಜೆಯ ಗುರುತು ಮರೆಯಾಗುತಿದೆ
ಪ್ರತಿ ಬಾರಿಯೂ ಅಪ್ಪಳಿಸುವ ಹೊಸ ಅಲೆಗಳಿಗೆ  
ಮತ್ತದೇ ಮನಸ್ಸು ಹೇಳುತಿದೆ 
ಇನ್ನೊಮ್ಮೆ ಮರಳನು ಸ್ಪರ್ಶಿಸು ಎಂದು

ಪುನಃ ಪುನಃ ಅದೇ ಕರಾಳ ಯೋಚನೆ 
ಕನಸಾಗಿ ನಿದ್ದೆ ಕೆಡಿಸುತ್ತಿದೆ 
ಮತ್ತದೇ ಮನಸ್ಸು ಹೇಳುತಿದೆ 
ನಿದ್ರಿಸು ಮತ್ತೊಮ್ಮೆ ಚಿಂತೆಗಳನು ಮರೆಯುವೆಯೆಂದು 

ತಿಳಿದಿದೆ ಮತ್ತೆ ಮತ್ತೆ ಅದೇ ಕಾರಣಕೆ ಕೊರಗುವೆನೆಂದು 
ನೋವಿನ ಸಾಗರದಲಿ ಮುಳುಗುವೆನೆಂದು 
ಮತ್ತದೇ ಮನಸ್ಸು ಜಪಿಸುತ್ತಿದೆ
ಅವಕಾಶ ಮುಗಿಯಿತು, ಸೋತು ಶರಣಾಗೆಂದು 

ಕತ್ತಲಲಿ ಬಿದ್ದ ಕನಸು ಕಣ್ತೆರೆಯುತ್ತಿಲ್ಲ 
ವೇದನೆಗೆ ಮಾತು ಆಡುತಿಲ್ಲ
ಕೊನೆಗೂ ತಿಳಿಸಿತು ಮನ, ಕೊರಗನ್ನು ಪದಗಳಲಿ ಹರಿ ಬಿಡಲು.... 
ಮೊದಲಿಗೆ ಆಲಿಸಿದೆನು ಮನದ ಮಾತನು 
ಚಿತ್ರಿಸಿದೆನು ನೋವು ಕಳೆಯುವ ಸಾಲುಗಳನು
ತುಂಬಿದೆನು ಪದಗಳಿಗೆ ನವ ಚೇತನವನು
ಮತ್ತೆ ಮತ್ತೆ ಮನ ಮುರಿಯುವ ಮಾಂತ್ರಿಕರು ಮನದ ಮುಗಿಲಿನಿಂದ ಮರೆಯಾಗಲೆಂದು
3
Reading under T&C