Kannada

ಫೇಸ್ಬುಕ್ಕೂ ವಾಟ್ಸಪ್ಪೂ, ಬ್ರೇಕಪ್ಪೂ..

Writer DP! RanGaa 26 May 20 7 Views
ಉಸಿರಿಗೆ ಉಸಿರು ತಾಕುವಷ್ಟು 
ಸನಿಹವಿದ್ದರೂ
ಅಪರಿಚಿತರಾಗಿಯೇ 
ಉಳಿಯುವ ನಗರದಲಿ
ಸಂಧಿ ಮಾಡಿತ್ತು ಹೇಗೋ 
ನಮ್ಮಿಬ್ಬರ ಫೇಸ್ಬುಕ್ಕು
ಬಯಲುಸೀಮೆಯ ನನ್ನ 
ಘಟ್ಟದೂರಿನ ಅವಳ
ವಿಳಾಸ ಅರಿಯದೇ ನೆಪಕ್ಕೂ

ಎಷ್ಟೊಂದು ಖುಷಿಯಿತ್ತು ಮೊದಲೆಲ್ಲ ಕೈಕೈಹಿಡಿದು ಸುತ್ತಾಡುವಾಗ ಇಸ್ಕಾನು ಓರಿಯನ್ನು ಲಾಲ್ಬಾಗು ಕಬ್ಬನ್ನು ಲುಂಬಿಣಿ ಗಾರ್ಡನ್ನು ಮಲ್ಲೇಶ್ವರ ಚಾಟ್ಸೂನೂ ಕಾಪಿಡುತಾವೆ ನಮ್ಮ ಹೆಸರೂ ಅವು ನೋಡಿದ  ಎಷ್ಟೋ ಪ್ರೇಮಿಗಳ ಒಟ್ಟಿಗೇ ಜೊತೆಗೂಡಿ ಎಂದೆಂದೂ
ನೆನಪಿನ್ನೂ ಹಸಿರಿದೆ ಆ ಮಳೆಯಾದ ಇಳಿಸಂಜೆ  ಗುಲ್ ಮೊಹರಿನ ಪಕಳೆಗಳು ಹರವಿದ್ದ ರಸ್ತೆಲಿ ನಡೆದಿದ್ದ ನಿನ್ನ ಕೈಹಿಡಿದ ನಾನು ಮರದ ಹನಿ ನೆಲ ತಾಕುವುದರೊಳಗೆ ಪ್ರೇಮ ನಿವೇದಿಸಿದ್ದು ಸಿಗ್ನಲ್ಲಲಿ ಗಾಳಿಹೃದಯ ಮಾರುವ  ದೈನೇಸಿ ಮಗುವ ಹಾಗೆ ನೀನು ಕಂಪಿಸಿದ್ದೆ ತಿರುವಿನಲ್ಲಿ ದಡಬಡಿಸುವ  ಮೆಟ್ರೋ ಬೋಗಿಯ ಹಾಗೆ
ಏನಾಯ್ತೋ ಯಾಕಾಯ್ತೋ  ಕಾರಣವೇ ತಿಳಿಯಲಿಲ್ಲ ಆ ಬಳಿಕ ವಾಟ್ಸಾಪಿನಲ್ಲಿ  ನಿನ್ನ ಚಿತ್ರವೇ ತೋರುತ್ತಿಲ್ಲ ನಿನ್ನ ತಾಕುವ ಎಲ್ಲ  ಮೂಲಗಳು ತೆರವಿಲ್ಲ ಬಾರುಗಳ ಸಹವಾಸದಲ್ಲಿ ನನಗಾದ ಜ್ಞಾನೋದಯ ನಾನಂದುಕೊಂಡಿದ್ದು  ನಮ್ಮ ಒಡನಾಟ  ಪ್ರೇಮ ಸಂಭ್ರಮ ನೀ ನಿರ್ಧರಿಸಿದ್ದು  ಸ್ನೇಹದ ಸರಹದ್ದು ಅಂತಿಮ
ಮತ್ತೆರಡು ಮಳೆಗಾಲ ಸರಿದಿದೆ ಬದುಕು ಹೊಸ ಲಹರಿಗೆ ಹೊರಳಿದೆ ನೆನಪು ಬಿಎಂಟಿಸಿಯ ಚಕ್ರದಷ್ಟು ಸವೆದಿದೆ ಇತ್ತೀಚೆಗೆಲ್ಲೋ ತುರ್ತಿನಲ್ಲಿ ಅಸ್ಪಷ್ಟವಾಗಿ ನೀ ಕಂಡೆ ಮೆಟ್ರೋದಲ್ಲಿ ನನಗೂ ನಿನಗೂ ಮತ್ತದೇ ಉಸಿರು  ತಾಗುವಷ್ಟು ಅಂತರ ನಿನ್ನ ಕಾಲಲ್ಲಿ ನಗುತ್ತಿತ್ತು ಕಾಲುಂಗುರ
ಈಗ ಅವಳದು ನೇರಳೆ ಮಾರ್ಗ ನನ್ನದು ಹಸಿರಿಗೆ ವರ್ಗ

0
Reading under T&C