Kannada

ಅಮ್ಮ - ಮೊದಲ ಬಾರಿಗೆ ಕೊಟ್ಟ ನೋವು

Writer DP! ಧ್ರುವ 26 Oct 16 40 Views

ಮಣ್ಣಿನ ಮೇಲೆ ನನ್ನ ತಂದವಳೆ

ಹೋಗದಿರು ನೀ ಅದರೊಳಗೆ

ಸಹಿ ಹಾಕದಿರು ಸಾವಿನ ಒಪ್ಪಂದದಲಿ

ಕೊಡದಿರು ಕಣ್ಣ ಒದ್ದೆ ಮಾಡುವ ಬಳುವಳಿ.



ನೀನಿಲ್ಲದ ಈ ಭೂಮಿ ನನಗೆ ಮಸಣ
ಸೇರದು ಕೈ ತುತ್ತು ನೀನಿಲ್ಲದೆ ಅಮ್ಮ
ನನ್ನ ಪರ ಯಾವಗಲು ನೀ ಇರಲು
ನೀನಿಲ್ಲದೆ ತಟ್ಟುತ್ತಿದೆ ಸಾವು, ಮನಗದ ಬಾಗಿಲು.



ನೀನೊಬ್ಬಳೆ ನನ್ನ ಖಾಲಿ ಮನದಲಿ

ದೀಪ ಆರದಂತೆ ನೊಡಿಕೊಂಡವಳು
ನೀನೊಬ್ಬಳೆ ಸಾವಿಲ್ಲದ ಪ್ರೀತಿಗೆ ನಿದರ್ಶನ
ನಿನಗೆ ಸಾವೆ? ಒಪ್ಪದು ಎಂದೆಂದಿಗು ಮನ.



ನಿನ್ನ ಹಾಗು ಸಾವಿನ ಮಧ್ಯೆ ನಾನಿರಲು

ಹೋದರೆ ಹೋಗುವೆ ನಾ ನಿನ್ನ ಬದಲು

ಮೋಸ ಮಾಡದಿರು ನನ್ನ ಬದಿಗೆ ತಳ್ಳಿ

ಕೊಡು ಅವಕಾಶವ ನಿನ್ನ ಋಣವ ತೀರಿಸಲು.



- ಧ್ರುವ 
2
Reading under T&C