Kannada

ಆಸೆ ಅಮ್ಮ

Writer DP! Rashmi Raj 06 Aug 17 9 Views
ಆಸೆಗಳು ಎಷ್ಟು ನನಗೆ,
ಕೇಳೆ ನೀ ಅಮ್ಮ,
ಹಾಕಲೆ ನಾ ನಿನಗೆ ಒಂದು ಕೈ ತುತ್ತು?
ಯಾರಿಗೂ ತಿಳಿಯದು ನೀ ಮಲಗುವ ಹೊತ್ತು.
ಜೋಗುಳವ ನಾ ಹಾಡಲೆ
ನಿನಗೂಂದು ಸಾಲ?
ಮಲಗು ನೀ ಮಗುವಂತೇ,
ಒಂದೇ ಒಂದು ಸಲ.
ತೋರಿಸಲೆ ನಾ ನಿನಗೆ ಒಮ್ಮೆ ಚಂದಾಮಾಮ?
ಅವನಿಗಿಂತ ಚಂದ ನೀನೇ ಕಣಿ ಅಮ್ಮ.
ಆಡಲೇ ನಿನ್ನ ಜೊತೆ ನಾನು ಕಣ್ಣಾ-ಮುಚ್ಚೇ?
ಅಯ್ಯೋ ಅಮ್ಮ‌ ನಿನ್ನ ಪ್ರೀತಿ ಅದೆಂಥ ಹುಚ್ಚೇ.
ನಡೆಯಲೇ ನಿಂನೊಂದಿಗೆ ಹೆಜ್ಜೆ ಮೇಲೆ ಹೆಜ್ಜೆ?
ನೀನಲ್ಲವೆ ತೊಡಿಸಿದ್ದೂ ನನ್ನ ಪುಟ್ಟ ಕಾಲುಗಳಿಗೆ ಗೆಜ್ಜೆ.
ಎಣಿಸಿ ಹೇಳಲೇ ನಿನಗೆ ಆ ನಕ್ಷತ್ರ ಗಳೆಲ್ಲ?
ನಿನ್ನ ಮಮತೆಗೆ ಸರಿ ಸಾಟಿ ಏನಿಲ್ಲ
ಆಸೆಗಳು ಎಷ್ಟು ನನಗೆ,
ಕೇಳೆ ನೀ ಅಮ್ಮ,
ಕಾಣದ ಕಣ್ಣುಗಳಿಗೆ ನಾನಾಗುವೆ ಕಣ್ಣು,
ಇದ್ದರೆ ಇರಬೇಕು ನಿನಂತೇ ಪ್ರತಿ ಹೆಣ್ಣು.
-ರಶ್ಮಿ ರಾಜ್
4/8/17
1
Reading under T&C