Kannada ಹೇಗೆ ತಾನೇ ಸಾಧ್ಯ??? Sheethal 17 Apr 20 8 Views ಚಂದಿರ ನಿನ್ನ ಹೊಗಳಿದ್ದ ಕಾರಣ ಮುನಿಸು ಬೆಳದಿಂಗಳಿಗೆ.. ರವಿಯೂ ನೋಡಿದಕ್ಕೆ ನಿನ್ನ ಕೋಪ ಸೂರ್ಯಕಾಂತಿಗೆ ... ಕಾರ್ಮೋಡ ನಿನಗೆ ತಂಪು ತರಲು ಮಿಂಚು ಗುಡುಗಿದ್ದಾಳೆ ತಾ ಬಾರದೆ.. ಸಾಗರವು ನಿನ್ನನ್ನಪ್ಪಲು ಅಲೆಯಾದಾಗ ನದಿಗಳೆಲ್ಲಾ ಅತ್ತು , ಉಪ್ಪು ತುಂಬಿದರು ಅವನ ಎದೆಯೊಳಗೆ... ವರ್ಣಿಸಲು ನಿನ್ನ ಸಾಧ್ಯವಾಗದೆ ವ್ಯಾಕರಣವೂ ಪರದಾಡಿದೆ ಉಪಮೇಯ ಸಿಗದೆ... ನಿನ್ನ ನೆರಳು ಭುವಿಯ ಸೋಕುವಾಗ ತಗುಲದಿರಲಿ ಕಲ್ಲೆಂದು ಹುಲ್ಲುಗಾವಲೇ ನಿನ್ನ ಹಾದಿಯಾಗಿದೆ.... ಕಂಡ ಕ್ಷಣವೇ ನಿನ್ನ, ನಾ ಕವಿಯಾಗಲು.... ಹೇಗೆ ತಾನೇ ಸಾಧ್ಯ??? ಹೇಳು ನಿನ್ನ , ನಾ ಪ್ರೀತಿಸದೇ ಇರಲು.... ----sheethal 0 Must Read Sign in to vote. Sign In Reading under T&C