Kannada

ದೇವರಿಗೆ ಸಾಕ್ಷಿ?!

Writer DP! ಧ್ರುವ 24 Oct 16 39 Views

ಪೂಜೆಯ ಮಾಡೋ ದೇವನಿಗೆ, ದಿನಕ್ಕೊಮ್ಮೆ ಪೂಜೆಯ ಮಾಡೊ
ತೃಪ್ತಿಯಂಬ ಹೂವಿನಿಂದ ಅಲಂಕರಿಸೋ ನಿನ್ನ ದೇವನಿಗೆ
ನಡವಳಿಕೆಯೇ ಜಪವಾಗಲಿ, ಒಳ್ಳೆತನವೆ ಮಂತ್ರವಾಗಲಿ
ಸ್ವೀಕರಿಸು ಕಹಿಯಾಗಲಿ, ಸಿಹಿಯಾಗಲಿ ಅದುವೆ ನೀನಿಟ್ಟ ನೈವೇದ್ಯ.


ಉತ್ತರ ಸಿಗದ ಪ್ರಶ್ನೆಯೆ ನಿನಗೆ ಸಾಕ್ಷಾತ್ಕಾರದ ಹಾದಿ
ಜೀವನವೊಂದು ಪ್ರಶ್ನೆಯು ಅಲ್ಲ, ಉತ್ತರವು ಅಲ್ಲ
ಆಸೆಯಂಬ ಸೆರೆಮನೆಗೆ ಸಿಲುಕದೆ
ಅನುಭವಗಳ ಹೂಡಿಕೆ ನಿನ್ನ-ನನ್ನ ಜೀವನ.


ದೇವನು ಸಿಕ್ಕಿದನು ಮುಸುಕ ಸರಿಸಿ ಚಿಮ್ಮುವ ಕಿರಣದಂತೆ
ಮನ ತಂಪು ಮಾಡುವ ಬೆಳದಿಂಗಳಂತೆ
ಅಸಹಾಯಕ ಮನದಲಿ ಉಮೇದು ತುಂಬಿದೊಡನೆ
ದ್ವೇಷದ ಕನಸ ಮರೆತೊಡನೆ!


ಎಲ್ಲರಿಗು ದೇವನೊಬ್ಬನೆ, ಅವನ ಕಾಣುವ ದೃಷ್ಟಿ ಹಲವು
ಮನವೆಂಬ ಗುಡಿಯ ಸ್ವಚ್ಚ ಪಡಿಸು
ಪೂಜೆಯ ಮಾಡೋ ದೇವನಿಗೆ
ದಿನಕೊಮ್ಮೆ ಪೂಜೆಯ ಮಾಡೋ!


-ಧ್ರುವ
7
Reading under T&C