Kannada ನಿತ್ಯದ ಸಾವು Unknown 17 Apr 20 3 Views ಯಾರ ದೃಷ್ಟಿ ತಾಕಿದೆ ಹೇಳು ನಿನ್ನ ಮನಸಿಗೆ? ಚೂರೂ ಕೂಡ ಬೆಲೆಯೇ ಇಲ್ಲವೇ ನನ್ನ ಕನಸಿಗೆ? ನವಿಲುಗರಿ ಪುಸ್ತಕದಿ ಮರಿಹಾಕುವುದಂತೆ, ನಂಬಿಕೆಯೇ ಈ ಬಾಳಿಗೆ ದೊಡ್ಡ ಆಸ್ತಿಯಂತೆ ಇನ್ಯಾರನು ನಂಬಲಿ ನಾ ಹೇಳು ನೀನೇ ಮತ್ತಿನಲ್ಲಿ ಕೊಟ್ಟ ಮಾತು ಬರೀ ಮಣ್ಣೇ.. ಎಲ್ಲ ಮೋಡಗಳು ಗರ್ಭ ಕಟ್ಟೋದಿಲ್ಲ ಎಲ್ಲ ಹೂಗಳನು ಹೆಣ್ಣು ಮುಡಿಯೋದಿಲ್ಲ. ಯಾವ ದಾರಿಗೂ ಇಲ್ಲಿ ಅಂತ್ಯವೆಂಬುದಿಲ್ಲ, ದಿಕ್ಕುಗೆಟ್ಟ ಜೀವವಾದೆ ಗುರುತೇಯಿಲ್ಲ. ಇಂಥ ಒಂದು ಬಾಳು ಬೇಕಾ ಹೇಳಿ ನೀವೇ ನೋವಿನಲ್ಲೂ ನಗುವುದೊಂದು ನಿತ್ಯದ ಸಾವೇ... ಹಣೆಬರಹಕೆ ಹೊಣೆ ಯಾರಿಲ್ಲ ತಿದ್ದಿ ಬರೆಯೋಕೆ ಪದಗಳೇ ಇಲ್ಲ. ತೀರದ ಸಂಕಟವ ತೀರದ ಮುಂದೆ ಅತ್ತು ಹೇಳಿಬಿಡಲೇ? ಪಾಪ, ಅದರ ಸಂಕಟವ ಕೇಳಿ ನಾ ಸಂತೈಸಲೇ? ಒಮ್ಮೆ ಸಿಕ್ಕು ಹೇಳಿ ಹೋಗು ಬದುಕೆಂದರೇನು? ನನಗಂತೂ ನೋವು ನಲಿವುಗಳ ಸಂಗಮವೇ ನೀನು 💐ವಾಗೀಶ್ ಚನ್ನಗಿರಿ💐 0 Must Read Sign in to vote. Sign In Reading under T&C