Kannada

ಅಮರ ....

Writer DP! Sheethal 17 Apr 20 3 Views

ಭಾವನೆಗಳು ಬತ್ತಿದರೂ ,  ನೆತ್ತರು ಎದೆಯಲ್ಲಿ ಹರಿಯಬೇಕಿದೆ ...  ಮರೆಯಲಾರದೆ ನಿನ್ನ, ಸಾವಿಗೆ ಕಾದು ಬದುಕಬೇಕಿದೆ...  ನೀ ಕಾಣದಿದ್ದರೂ ಇನ್ನೆಂದಿಗೂ, ನಿನಗಾಗಿ ಪದಗಳು ಹುಡುಕಲು ನಯನಗಳು ಬೇಕಿವೆ..  ಕಂಬನಿಯ ಕೊಡ ಮುಗಿದಿದ್ದರೂ , ಖೇದದ ಬಾವಿಯಲ್ಲಿ ಇನ್ನೂ ನೀರು ಸಾಗರದಷ್ಟಿದೆ ...  ಪ್ರೀತಿಸುವುದನ್ನೇ ತ್ಯಜಿಸಿದರೂ, ನಿನ್ನೊಂದಿಗಿನ ಕ್ಷಣಗಳ ಕಲೆ ಹಾಕಲು ಹೃದಯ ಬೇಕಿದೆ...  ನಿನ್ನ ಧ್ವನಿ ಕೇಳದೇ ಇದ್ದರೂ , ಕಾಲನ (ಯಮನ) ಕರೆ ಆಲಿಸಲು ಕರ್ಣಗಳು ಬೇಕಿವೆ ....  ಸವೆಯದಿರು ಸಮಯವೇ , ಅವಳ ನೆನಪುಗಳೊಂದಿಗೆ ಇನ್ನೂ ಸಂಭಾಷಿಸಬೇಕಿದೆ....  ನಾ ಅಳಿಸಿ ಹೋದರೂ, ನಮ್ಮ ಪ್ರೀತಿ ಈ ಪದಗಳಲ್ಲಿ ಅಮರವಾಗಬೇಕಿದೆ... 
---ಶೀತಲ್ 
0
Reading under T&C