Kannada

ನಾವು ‌ಕಂಡ‌ ಕನಸ...

Writer DP! ಧ್ರುವ 27 Jun 17 9 Views

ಚಂದ್ರನ ಬೀಳ್ಕೊಡುವ ಬೆಳಕೆ ನೀನು
ಸೂರ್ಯನ ಬೀಳ್ಕೊಡುವ ರಾಗವೆ ನೀನು
ಚಿಟ-ಪಟ ಮಳೆಯ ಹನಿಯೆ ನೀನು
ಎತ್ತ ಚಿತ್ತ ಕಂಡರು ಕಾಡಿಹೆ ನೀನು.


ಕಾಲದ ಅರಿವನ್ನು ಮರೆಸಿ ಅಂದು
ಕಾಲವೆ ಕೈಜಾರಿದೆ, ದಾರಿ ಕಳೆದು
ಎಂದು ಸಾರಿ ಹೇಳಿದೆ ಜೀವನದ ನಿಯಮ
ಬದಲಾಗಿ ಕಾದಿದೆ ಹೊಸದಾದ ಆಯಾಮ.
ಕ್ಷಮೆಯ ಕೊಡೆಯ ಹಿಡಿಯುವೆ ನಾನ್ನಿಂದು
ನಿನ್ನಯ ನೆನಪ ಮಳೆಯಲ್ಲಿ ನೆನೆದು
ನೆನ್ನೆ ನಾಳೆಗಳ ತುಂಬಿದೆ ಪುಟ್ಟ ಡಬ್ಬಿಯಲ್ಲಿ
ಹೊತ್ತಿ ತಿರುಗಿಹೆ ಜೀವನ ಎಂಬ ಹೆದ್ದಾರಿಯಲ್ಲಿ.


ಕಾಯುತ್ತಿರುವೆ ಮುಂಗಾರಿಗೆ ಸುಡು ಬಿಸಿಲಿನಲ್ಲಿ
ಕಡೇಪಕ್ಷ ಸುಂದರವಾಗಿಸಲು ನನ್ನಯ ಕಲ್ಪನೆ
ತರದಿದ್ದರು ಕಾರ್ಯರೂಪಕ್ಕೆ ನನ್ನನ್ನೆ
ಕಾಪಾಡುವೆ ನಾವು ಕಂಡ ಕನಸ... ಜೋಪಾನವಾಗಿ!
0
Reading under T&C