Kannada

ಬದುಕು

Writer DP! ಧ್ರುವ 23 Jan 17 8 Views
ಸ್ಪರ್ಧೆ ಅಲ್ಲ‌ ನಿನ್ನ ಬದುಕು
ನಿಂತು ಒಮ್ಮೆ ನಿನ್ನ ಹುಡುಕು

ಬತ್ತಿ ಹೋಗುವುದು ಓಡುವ ನದಿಯು ತುಂಬಿ ತುಳುಕಲು ನಿಂತಿದೆ ಕಡಲು
ಬಂದೆ ಬರುವ ನಾಳೆ ಸೂರ್ಯನ ಯಾರು ಗಮನಿಸರು ಮಾಯ ಆಗುವ ಶಶಿ ಎಲ್ಲರ ಪ್ರೀತಿ ಗುರುತವನು
ಸ್ಪರ್ಧೆ ಅಲ್ಲ ನಿನ್ನ ಬದುಕು ನಿಂತು ಒಮ್ಮೆ ನಿನ್ನ ಹುಡುಕು
ಬೆಳಕಿನಲಿ ಓದುವ ಮುನ್ನ ಕತ್ತಲಲಿ ಯೋಚಿಸುವುದ ಕಲಿ ಗೆಲುವಿನಲಿ ಮಿಂಚುವ ಮುನ್ನ ಸೋಲಲ್ಲಿ ಕಲಿಯುವುದ ಕಲಿ
ನೀನೆ ನಿನ್ನ ನೆರಳು, ನಿನ್ನ ನೆರವಿಗೆ ಯಾರು ಬರರು ನೀನೆ ನಿನ್ನ ನಿಂದನೆ, ನಿನ್ನ ನಿಲುವಿಗೆ ನೀನೆ ಹೊಣೆಯು
ಸ್ಪರ್ಧೆ ಅಲ್ಲ ನಿನ್ನ‌ ಬದುಕು ನಿಂತು ಒಮ್ಮೆ ನಿನ್ನ ಹುಡುಕು.
0
Reading under T&C