Kannada

ಕವಿತೆಯೊಂದನು ಹೇಳುವೆ

Writer DP! ಮಲ್ಲಿನಾಥ 24 Nov 20 3 Views
ಕವಿತೆಯೊಂದನು ಹೇಳುವೆ
ಕಿವಿ ಕೊಟ್ಟು ಕೇಳು ನೀ
ಬಿಳಿಹಕ್ಕಿ ಹಾರಿದೆ
ತಿಳಿನೀರ ಕೆರೆ ಏರಿಯಲಿ
ಅವಳಿಗೆ ನಾ ಬರೆದ ಓಲೆಯ ಕದ್ದು
ತನ್ನವಳಿಗೆ ತೋರಿಸಲು
ಅವಳ ಪ್ರೀತಿ ಗಳಿಸಲು
ಪೆನ್ನ ಶಾಯಿ ಖಾಲಿಯಾಗಿ ಕಣ್ಣ ಹನಿಯ ಬಳಸಿದೆ,
ಕಣ್ಣ ಹನಿಗೂ ತನ್ನ ವ್ಯಥೆಯ ಕಥೆಯೊಂದು ಹೊಳೆದಿದೆ,
ಹೊನ್ನ ಬೆಳಕ ಚಲುವೆ ಅವಳು ಕಣ್ಣಿನಲ್ಲೇ ಮಡಿದಳು,
ಕಣ್ಣ ಹನಿಗೂ ತನ್ನತನದ ಭಾವನೆಯ ಬರೆದಳು
ಇಳಿಸಂಜೆ ಅವಳ ಸೌಂದರ್ಯಕ್ಕೆ ಮನಸೋತ ಚಂದಿರ
ರಾತ್ರಿ ಸರೋವರದಲ್ಲಿ ಸಾವಿಗಿಡಾಗಿದ್ದ
0
Reading under T&C