Kannada

ನೆನಪಿನ ಮಳೆ

Writer DP! MC Sharma 17 Jan 17 11 Views
ನಿನ್ನ ನೆನಪಿನ ಮಳೆಯ,
ಒಂದೊಂದು ಹನಿಗಳಲ್ಲಿ ನೆನದು, ನಕ್ಕು ನಲಿದೆ ನಾನು,
ಹೊಸದಾದ ಹುಮ್ಮಸ್ಸು ಮೈದಡವಿ ಒಡಮೂಡಿ,
ಹರೆಯದ ಮನಕ್ಕೆ ಹೊಸದೊಂದು ಒಸಗೆಯ ನೀಡಿದೆ,
ಕಿವಿಗೆ ಇಂಪಿಡುವ ಮಾಮರದ ಕೋಗಿಲೆಯದು, ಕುಹೂ ಕುಹೂ
ಮನಕೆ ತಂಪೆರೆವುದು, ನಿನ್ನೇದೆಯ ಢವ ಢವದ ಸದ್ದು.
ತಾಗಿ ಬಾಗುವ ಹಚ್ಚ ಹಸುರದು, ಉಸುರುವುದು ನಿನ್ನ ಹೆಸರು,
ಕಣ್ಣ ರೆಪ್ಪೆಯದು ತೆರೆಯಲೊಪ್ಪದು, ಜಾರಿ ಹೋಗುವುದಂತೆ ನಿನ್ನ ಕನಸು
0
Reading under T&C