Kannada ಈ ಪ್ರೀತಿ ಪ್ರೇಮ ಎಲ್ಲಾ Ganesh M 19 Apr 20 6 Views ಕಣ್ಣು ಕಣ್ಣನ್ನು ಸೇರಿತು ಕಣ್ಣು ಮನವನ್ನು ಕೇಳಿತು ಮನವದು ನಕ್ಕು ನುಡಿಯಿತು ಈ ಪ್ರೀತಿ ಪ್ರೇಮ ಎಲ್ಲ ನಮ್ಮಂತವರಿಗೆ ಅಲ್ಲ ಮುದ್ದಿನ ಮೊಗವನ್ನು ನೋಡಿದೆ ಅವಳ ಹಿಂದೆಯೇ ಓಡಿದೆ ನಿಂತು ನನಗೇ ನಾ ಹೇಳಿದೆ ಈ ಪ್ರೀತಿ ಪ್ರೇಮ ಎಲ್ಲ ಕೈಗೆಟುಕದ ಬೆಲ್ಲ ಎಲ್ಲಿ ನೋಡಿದರಲ್ಲಿ ಅವಳ ಒಲವ ಸುಳಿಯಲ್ಲಿ ಸಿಲುಕಿದವರೇ ನಿಲ್ಲಿ ಈ ಪ್ರೀತಿ ಪ್ರೇಮ ಎಲ್ಲ ಅನುಭವಿಸಿದವನೆ ಬಲ್ಲ ಮನದ ಮೂಲೆಯ ತುಡಿತ ಎದೆಗೆ ಹಿತವಾದ ಕೆರೆತ ಹೊಟ್ಟೆಪಾಡಿಗೆ ಹೊಡೆತ ಈ ಪ್ರೀತಿ ಪ್ರೇಮ ಎಲ್ಲ ಹಸಿವಿನ ಮುಂದೆ ಇಲ್ಲ 0 Must Read Sign in to vote. Sign In Reading under T&C