Kannada

ಎತ್ತಿನಗಾಡಿ

Writer DP! Unknown 29 May 20 3 Views

ತ್ತಿನ ಗಾಡಿ


ಈ ಪ್ರೀತಿ ಪ್ರೇಮ ಎಲ್ಲವು ಅಣ್ಣ
ಜೀವನದಾಟಕೆ ತಳಹದಿಯಣ್ಣ
ನಂಬಿ ನೀ ಪ್ರೀತಿ ಪ್ರೇಮವನ್ನ
ದಾಂಪತ್ಯದ ಗಾಡಿಯ ಕಟ್ಟಣ್ಣ

ದಾಂಪತ್ಯ ಎಂಬುದು ಎತ್ತಿನ ಗಾಡಿ.
ಗಂಡ-ಹೆಂಡತಿ ಚಕ್ರದ ಜೋಡಿ.
ಕಟ್ಟಿಹ ಎತ್ತು "ಕಾಮ"ಣ್ಣ
ಎಳೆವನು ಗಾಡಿಯ ನೋಡಣ್ಣ

ಪುಟ್ಟನ ಮಕ್ಕಳು ಜನಿಸಿಹರು
ಗಾಡಿಯನೇರಿ ಕುಳಿತಿಹರು
ಚಕ್ರಕೆ ಭಾರವು ಹೆಚ್ಚಿಹುದು
ಕಟ್ಟಿಹ ಎತ್ತು "ಮೋಹ"ವಣ್ಣ
ಎಳೆವನು ಗಾಡಿಯ ನೋಡಣ್ಣ

ಮಕ್ಕಳ ಬೆಳೆಸುತ ಕುಣಿದಿಹರು
ಮನೆ-ಮನಗಳ ಕಟ್ಟಿ ಬೆಳೆಸಿದರು
ಚಕ್ರಕೆ ಅನುಭವ ಹೆಚ್ಚಿಹುದು
ಕಟ್ಟಿಹ ಎತ್ತು "ಮದ"ವಣ್ಣ
ಎಳೆವನು ಗಾಡಿಯ ನೋಡಣ್ಣ

ಪಕ್ಕದ ಗಾಡಿಯು ತುಂಬಿಹುದು
ತಮ್ಮೊಂದಿಗೆ ಹೋಲಿಕೆ ಮಾಡಿದರು
ಚಕ್ರದ ಮನವು ಕುಗ್ಗುವುದು
ಕಟ್ಟಿಹ ಎತ್ತು"ಮತ್ಸರ"ವಣ್ಣ
ಎಳೆವನು ಗಾಡಿಯ ನೋಡಣ್ಣ

ಮನೆ ಮನಗಳು ತುಂಬಿಹವು
ಆದರೂ ತೀರದ ದಾಹವಿದು
ಚಕ್ರವು ಮರೀಚಿಕೆಯ ಹಿಂದಿಹುದು
ಕಟ್ಟಿಹ ಎತ್ತು"ಲೋಭ"ವಣ್ಣ
ಎಳೆವನು ಗಾಡಿಯ ನೋಡಣ್ಣ

ಮಕ್ಕಳು ಮೆಲ್ಲನೆ ಬೆಳೆದಿಹರು
ಪ್ರತಿಯೊಬ್ಬರ ಗುರಿಯೂ ಬೇರಿಹುದು
ಚಕ್ರದ ಬಿಸಿಯು ಹೆಚ್ಚಿಹುದು
ಕಟ್ಟಿಹ ಎತ್ತು "ಕ್ರೋಧ"ವಣ್ಣ
ಸಂಭಾಳಿಸೆ ಸಂಸಾರ ಉಳಿವುದಣ್ಣ

ಕಾಮ, ಕ್ರೋಧ, ಮೋಹದಲು
ಲೋಭ, ಮದ, ಮಾತ್ಸರ್ಯದಲು
ಚಕ್ರವು ಒಂದರ ಜೊತೆಗೊಂದು
ಒಬ್ಬರಿಗೊಬ್ಬರು ಗುರುವಾದರೆ ಇಂದು
ಕಟ್ಟಿಹ ಎತ್ತು "ನಿರ್ವಾಣ"ವಣ್ಣ 
ಎಳೆವನು ಗಾಡಿಯ ನೋಡಣ್ಣ

ಪ್ರೀತಿ ಪ್ರೇಮ ತಳಹದಿಯಾಗಿರಲು
ಸಹ ಜೀವನ ತುಂಬಿ ತುಳುಕುವುದು
ನಿರ್ವಾಣವೇ ಗಾಡಿಯ ಗುರಿಯಣ್ಣ
ಎತ್ತು ಕಟ್ಟಲು, ಬೇಗ ಕಲಿಬೇಕಣ್ಣ


ವಂದನಾ 
0
Reading under T&C