Kannada

ಕಾಣದ ಕನಸು

Writer DP! Chethan Kumar N 06 Aug 17 49 Views
ಕನಸು ತುಂಬಿದ ನಿದ್ರೆಗೆ ಎಚ್ಚರವಿಲ್ಲ
ಕಂಬನಿ ತುಂಬಿದ ಕಂಗಳಿಗೆ ಸ್ಪಷ್ಟತೆಯಿಲ್ಲ
ಅವುಗಳಿಗೆ ಬೆಳಕಾಗಿ ನಿಂತೆ ನೀ ಆಗಸದಂತೆ

ನಿತ್ಯ ಧರೆಯ ಸ್ಪರ್ಷಿಸುವ ಕಿರಣಗಳಿಗೆ ಭೇದವಿಲ್ಲ
ನೆಲ ಮುಟ್ಟುವ ಹನಿಗಳಿಗೆ ನೇರ ರೇಖೆಯಿಲ್ಲ
ಇವುಗಳ ನಡುವೆಯು ಮಿಂಚಾಗಿ ಬಂದು ಹೋದೆ ನೀ ಎಂದಿನಂತೆ

ಬರಹಗಾರನಲಿ ಪದಗಳು ಬತ್ತಿ ಹೋದರು
ಕವಿತೆಯಲಿ ಕಲ್ಪನೆಗಳು ಕಾಣದಾದರು
ಕಂಗಳ ಬೆಳಕಿಗೆ ಕತ್ತಲು ಸೋಲದಿರದು
ನಿನ್ನ ಕುರಿತ ಆಲೋಚನೆಗಳಿಗೆ ಕೊನೆಗಳಿರವು

ನಿದ್ದೆಯ ಕ್ಷಣದಲಿ, ರೆಪ್ಪೆಗಳಿಗೆ ರೆಕ್ಕೆ ಬಂದು,
ಹಾರಿ ಹೋಗಿವೆ ನಿನ್ನ ಹುಡುಕಿ
       ಎಚ್ಚರದಲಿ ನೀ ಕಾಣದೆ
ನಸು ನಕ್ಕು ನಾ ಮುಂದೆ ನಡೆದೆ, ಎಂದಿನಂತೆ

ಮುಗಿಯುವ ಕಥೆಗೆ ಮುಗಿಯದ ಮುನ್ನುಡಿ ಬರೆದು
ಚಲಿಸುವ ಕಾಲದಲಿ ಚಲಿಸದ ಆಸೆಯ ಬೆನ್ನು ಹಿಡಿದು
'ನೀ' ಎನ್ನುವ ನಿಜ ಇಲ್ಲದಿದ್ದರು
'ನಿರೀಕ್ಷೆಯಲ್ಲಿರುವುದು ಮನದ ಮುಗಿಲು' ಹಲವು ಬಾರಿ ಸೋತು ಸೋತು ಹೋದರು



0
Reading under T&C