Kannada

ನಮ್ಮ ನಡುವೆ ಇರಲಿ ಅಂತರ

Writer DP! Narasimha Bharadwaj 07 Apr 20 14 Views
ನಮ್ಮ ನಡುವೆ ಇರಲಿ ಅಂತರ
ಮೋಜು ಮಸ್ತಿ ಜೀವ ಉಳಿದಾನಂತರ. ಬಂದೊದಗಿದೆ ದೊಡ್ಡ ಗಂಡಾಂತರ ಮನೆಯಲಿರಲು ಬೇಡ ಬೇಸರ ನಮ್ಮ ನಡುವೆ ಇರಲಿ ಅಂತರ
ಹೊರಹೋಗಲು ಏಕಿಷ್ಟು ಕಾತರ ಅಪಾಯಕ್ಕೆ ಕಾರಣವೇ ಅವಸರ ಹುರಿದುಂಬಿಸುವ ವೈದ್ಯ ದಾದಿಯರ ಇರಲಿ ಭಯ ಪೋಲೀಸರ ನಮ್ಮ ನಡುವೆ ಇರಲಿ ಅಂತರ.
ಪರಿಸ್ಥಿತಿ ತೀರ ಗಂಭೀರ ಬೇಡ ತಪ್ಪುವುದು ಎಚ್ಚರ ನಮಗೆಲ್ಲವಿಹುದು ಸುಂದರ ಸಂಸಾರ ಆಗದಿರಲಿ ಅದಕ್ಕೆ ಹಾನಿಕರ ನಮ್ಮ ನಡುವೆ ಇರಲಿ ಅಂತರ
ತೋರಿದರೂ ಕೊಂಚ ತಾತ್ಸಾರ ಭವಿಷ್ಯ ಘೋರ ಭಯಂಕರ ಮನೆಯಲಿರುವುದೇ ದೊಡ್ಡ ಉಪಕಾರ ಸರ್ಕಾರಕ್ಕೆ ಬೇಕು ನಮ್ಮ ಸಹಕಾರ ನಮ್ಮ ನಡುವೆ ಇರಲಿ ಅಂತರ
ಕತ್ತಲು ಮುಗಿದಮೇಲೆ ಮೂಡಲೇಬೇಕು ನೇಸರ ಕಾಯ್ದು ಕೊಂಡರೆ ಅಂತರ ಮುಂದೆ ಜೀವನ ಸುಂದರ ಬದುಕು ನಿತ್ಯ ನಿರಂತರ ಬದುಕು ನಿತ್ಯ ನಿರಂತರ.........
ಇಂತಿ ನರಸಿಂಹ ಭಾರದ್ವಾಜ
2
Reading under T&C