Kannada

ಹೊರಗೆ ನಡೆ

Writer DP! ಧ್ರುವ 16 Dec 16 17 Views
ಒಳಿತೊಳಗೆ ತಪ್ಪುಗಳಿರುವಾಗ
ಬಾಡಿಹೋದ ಮನ ಅರಳಬಾರದೆ ಸೂರ್ಯ ಮುಳುಗುವಾಗ ಬಾನಿನ ಅಂಗಳದಿ ಚಂದಿರನು ಚುಕ್ಕಿ ಗಳಿಡಬಾರದೆ.
ಬೆಳಕಿನ ಜೀವನ ಕತ್ತಲಲ್ಲಿರುವಾಗ ಕೊನೆ ಉಸಿರಂತೆ ಜೀವಿಸು ಈ ಸುಳಿಯಲಿ ಮೇಲ್ಚಾವಣಿ ಇರದು ಕನಸುಗಳಿಗೆ ಕಾಯಲು ಬಿಡು ಆಶಯದ ನೆರಳಿನಡಿ.
ಭಂಗಿ ಹೊಡೆದ ಮನಸು ತೋರಿದೆ ಮುಂದಾಗುವ ನನಸು ಕಾರಣವಿಲ್ಲದೆ ಬಡಿಯುವ ಹೃದಯ ಸ್ಪರ್ಶವಿಲ್ಲದ ದೇಹ ನೀ ಕಣಯ್ಯ.
ಸೋಲು ಗೆಲುವಿಗೆ ಉಚಿತ ಉಪಯೋಗಿಸುವೆ ನೀ ಖಚಿತ ಉದಯಿಸಲು ಮರಿಯದೆ ಮತ್ತೊಮ್ಮೆ ನಿಂತು ಜಗತ್ತ ಹೊರಗೆ ನಡೆ!
4
Reading under T&C