Kannada

ಮೌನ ರಾಗ

Writer DP! Preethi GM 11 Mar 16 32 Views
ಅಂದೊಮ್ಮೆ ಆ ಕ್ಷಣದಲ್ಲಿ 
ನಲಿದಿತ್ತು ಈ ಮನ 
ಹರುಷದಿಂದ ಕುಣಿದಾಡುತ 
ಹಾಡುತ್ತಿತ್ತು  ಒಲವ ಗಾನ 

ದಿನಗಳು ಉರುಳಿ 
ಮನದಲಿ ಒಲವ ಹೂ ಅರಳಿ 
ಕ್ಷಣಕ್ಷಣ ಮರಳಿ ಮರಳಿ 
ನೋಡುತ್ತಿತ್ತು ಮನ ಆಡುತ ಹರುಷದೋಕುಳಿ 

ಕಾಣುತ ಮುಂದಿನ ಕನಸು 
ತನ್ನನ್ನೇ ಮರೆತ್ತಿತ್ತು ಮನಸು 
ಹುಡುಕಲೊರಟಿತು ಮರೆತ ಮನ
ಹಾಗೆ ಮುಂದುವರೆದಿತ್ತು ಸ್ವಪ್ನ ಯಾನ 

ಇಂದು ನೋಡುತಿದೆ ವರ್ತಮಾನ 
ಏನಿದು ಹೊಸ ಸಂಚಲನ 
ಎಲ್ಲಿಗೆ ಈ ಪಯನವೀಗ ಎಂದು 
ಮತ್ತೆ ಹಾಡುತಿದೆ ಅದೇ ಮೌನ ರಾಗದಲಿ  ನೊಂದು
2
Reading under T&C