Kannada

ಪ್ರೀತಿ ನಾನಾ ರೀತಿ

Writer DP! Thejaswi C S 05 Jun 20 5 Views
  ಈ ಪ್ರೀತಿ ಪ್ರೇಮ ಎಲ್ಲಾ..
 ಆ ಭಗವಂತನೇ ಬಲ್ಲ.
ಇಟ್ಟನಲ್ಲಾ , ಇರುವೆಗೊಂದು ಬೆಲ್ಲ
ನಲ್ಲೆಗೊಬ್ಬ ನಲ್ಲ .

ನಿನ್ನ ಬಿಟ್ಟು ಇರಲಾರನೆಂಬ ಸ್ಥಿತಿ. ನೀನೇ ನನ್ನ ಹೃದಯದ ಒಡತಿ. ನಿನ್ನ ಕಾಯುವೆ, ತಾಯಿ ಮಗುವ ಕಾಯುವಾ ರೀತಿ. ಈ ಅಪೂರ್ವ ಭಾವನೆಯ ಹೆಸರೇ ಪ್ರೀತಿ.
ಪ್ರೀತಿಯೆಂಬುದು ಮೊದಲೇ ಮಾಯೆ ಬೀಳದಿರಲಿ ಜಾತಿಭೇದಗಳ ಛಾಯೆ ಜಾತಿಯ ಮದ ಏರಿದವರಿದವರಿಗಿಲ್ಲಾ ಕಿಂಚಿತ್ತೂ ದಯೆ ಅವರಿಂದ ಪ್ರೇಮಿಗಳ ಕಾಪಾಡು ತಾಯೆ.
'ಪ್ರೀತಿ' ಪದದ ಅರ್ಥವೇ ನಿಗೂಢವಲ್ಲವೇ!! ತಾಯಿಯ ವಾತ್ಸಲ್ಯವೇ ಪ್ರೀತಿ. ತಂದೆಯ ಬೆಚ್ಚನೆ ಅಪ್ಪುಗೆಯೇ ಪ್ರೀತಿ. ಒಡಹುಟ್ಟಿದವರ ಅಕ್ಕರೆಯೇ ಪ್ರೀತಿ. ಇನಿಯನ ಮುತ್ತುಗಳ ಸುರಿಮಳೆಯೇ ಪ್ರೀತಿ. ಸಂಗಾತಿ ನೀಡುವ ಬಾಳಿನ ಭರವಸೆಯೇ ಪ್ರೀತಿ.  ಈ ಎಲ್ಲ ಭಾವನೆಗಳೂ ಪ್ರೀತಿಯಲ್ಲವೇ ? ಇನ್ನೆಲ್ಲೋ ಪ್ರೀತಿಯ ಅರ್ಥ ಹುಡುಕುವುದು ತರವೇ? ಎಲ್ಲದರಲ್ಲೂ ಪ್ರೀತಿ ಕಾಣುತ್ತ ಮನದ ದುಃಖ ಮರೆಯೋಣವಲ್ಲವೇ?


0
Reading under T&C