Kannada

ಆನಂದ ಕಂದ

Writer DP! Divya Karthik 18 Sep 19 9 Views
ನವ ಮಾಸದ ತಪಸ್ಸಿನ ವರದಾನ ನೀನು 
ಘೋರ ಯಾತನೆ ಬಳಿಕ ದೊರೆತ ಸಿಹಿಯ ಜೇನು
ಮರೆಸಿದೆ ನೋವನ್ನು ನೀ ಸೇರಿ ಮಡಿಲನು

ಹೊಸ ಪ್ರಪಂಚದಲಿ ನಲಿದಿರಲು ನೀನು  ನೀ ನನ್ನ ಜಗವಾಗಿರುವೆ ತಿಳಿದಿರುವೆಯೇನು ನಾ ಅರಿಯದೆ ಹೋದೆ ಓಡುವಾ ಕಾಲವನು
ಒಂದು ಎರಡಾಯಿತು ಎರಡು ಮೂರಾಯಿತು ನಿನ್ನಾರೈಕೆಯಲಿ ಮಾಸಗಳು ಕಳೆಯಿತು  ನಿನಗೊಂದು ನಾಮಧೇಯವಿತ್ತು ಸಂಭ್ರಮಿಸಾಯಿತು
ನೀ ನಕ್ಕರೆ ನಗುವೆನು ನೀ ಅತ್ತರೆ ಅಳುವೆನು ನಿನ್ನೊಡನೆ ಆಡುತ್ತಾ ನಾ ಮಗುವಾದೆನು ತಾಯ್ತನದ ಕಷ್ಟ-ಸುಖಗಳ ಈ ಪರಿ ಅರಿಯುತಿಹೆನು
ಮಗುವೇ ನೀನೇರಿರುವೆ ವರುಷದಾ ಮೆಟ್ಟಿಲು ನಿನ್ನ ಭವಿಷ್ಯ ರೂಪಿಸುವ ಕನಸು ಹಗಲಿರುಳು ನಮ್ಮ ಸುಖ ಅಡಗಿಹುದು ನಿನ್ನಲಿ ನೀ ನಗುತ ಬಾಳಲು
2
Reading under T&C