Kannada

ಕಿತ್ತೋದ ಗುಂಡಿ

Writer DP! ಧ್ರುವ 08 Apr 17 18 Views
ತಣ್ಣೀರ ಸ್ನಾನ ತಂಪಾದ ಮನ
ಒಣಗಿಸಿ ತಲೆ ಕೈಗೆತ್ತಿಕೊಂಡ ಅಂಗಿ ಒಂದಾದ ಮೇಲಂತೆ ಇನ್ನೊಂದು ಗುಂಡಿಯ ಹಾಕುತಲೆ ಬಂಧಿಯಾಗಿದ್ದ ಗುಂಡಿಯೊಂದು ತಪ್ಪಿಸಿಕೊಂಡಿತು.
ಬದಲಿ ಗುಂಡಿ ಇದ್ದರು ಸಹ ಕಳೆದೋದ ಗುಂಡಿಯ ಹುಡುಕಾಟವ ಆಚರಿಸಿದ ನಾಲ್ಕು ಗೋಡೆಯ ಕೋಣೆ ಇವನಿಗೆ ಕಾಡಲ್ಲಿ ಕಳೆದೋದ ದಾರಿ ಆಯಿತು.
ಇವನ ಕಣ್ಣು ಮುಟ್ಟದ ಮೂಲೆ ಇಲ್ಲ ಇವನ ಕೈ ಕಾಣದ ಜಾಗ ಇಲ್ಲ ಏನೊ ಬಂಧ ಏನೊ ಪ್ರೀತಿ ಅದೇ ಗುಂಡಿ ಬೇಕೆಂದು ಇವನ ಹುಡುಕಾಟದ ಕಥೆ ಹೇಳಿತು.
ಅನಿರೀಕ್ಷಿತವೆಂಬಂತೆ ಇವನ ಕಣ್ಣು ಜಾರಿ ಬಿದ್ದಿತು ಅದೇ ಗುಂಡಿ ಇವನ ಮೊಗದಲಿ ನಗುವ ತಂದಿತು ಅಮ್ಮ ಹೊಲಿದು ಕೊಟ್ಟ ಕೊನೆ ಗುಂಡಿ ಎನ್ನುತ ಕಣ್ಣ ಒರಸಿ ನೆಮ್ಮದಿಯ ಉಸಿರು ಬಿಟ್ಟ.
0
Reading under T&C