Kannada

ಸಾಲ

Writer DP! Chethanprasad N 08 Apr 20 14 Views
ಯಾರೆಷ್ಟು ಕೊಟ್ಟರೋ.,ನಾವೆಷ್ಟು ಕೊಟ್ಟೆವೋ ಸಾಲ..ಪಡೆದಷ್ಟು ಕಳೆದಂತೆ.,ಕಳೆದಷ್ಟು ಪಡೆದಂತೆ.,ಪಾಪ ಪುಣ್ಯವೇ ಆತ್ಮಕ್ಕೆ ಸಾಲ..!!!!

ಹಕ್ಕಿಯಾ ಕೂಗಿಗೆ ಸೂರ್ಯನ ಕಿರಣದ ಸಾಲ.. ಭೂಮಿಯಾ ಕುರುಡು ಕಂಗಳಿಗೆ ಚಂದ್ರಮದ ಸಾಲ..!!
ಅಪರಿಚಿತ ಮುಖದ ಶೀಟಿಯೂ ಮಗು ತುಟಿಗಿಟ್ಟಿತು ನಗುವೊಂದ..ದಿವ್ಯನಿದ್ದೆ ಕೊಟ್ಟಿತು ಕನಸೊಂದ..ಅದುವೂ ಸಾಲ..!!
ಮೊದಲ ಪ್ರೀತಿಯ ಕೊಡುವುದು ಕಣ್ಣೀರ ಸಾಲ.., ಸಾಲು ಸಾಲು ಹುಡುಗಿಯರ ಆಸೆಗಳ ಸಾಲ..!!
ಕಣ್ಣುಬಿಡದ ಕಂದನೂ ಅಲ್ಲ ತಾಯೆದೆಹಾಲಿಂದ ಸಾಲಮುಕ್ತ.. ಕಟ್ಟಿಕೊಂಡ ಬದುಕು ಬಿರುಕಲ್ಲ ಅಪ್ಪ ಕೊಟ್ಟರು ಇಟಿಗೆಯ ಸಾಲ..!!
ಯಾರ್ಯಾರಿಗೆ ಏನೇನು ಎಷ್ಟೆಷ್ಟು ತೀರಿಸುವುದು..?? ಎಷ್ಟು ಉಳಿಸಿಕೊಳ್ಳುವುದು..!!
ಹುಟ್ಟು ಸಾಲಗಾರರು ನಾವೆಲ್ಲಾ ಇಟ್ಟುಕೊಂಡೇ ಬಂದೆವು ಕರುಳಬಳ್ಳಿ..
ಯಾರು ನೀಡಲಾರರು ಸಮುದ್ರಕ್ಕೆ ಸಿಹಿಯಾ ಸಾಲ..,ದಂಡೆಯಿಂದ ದೂರ ಸೂರ್ಯನ ನೋಡಿ ಕಾಲ್ತೊಳೆದು ಸಾಗು..ಎಲ್ಲರಿಗೂ ತಲುಪಿಸು ನಗುವಿನ ಸಾಲ...!!!
1
Reading under T&C