Kannada

ಮೌನ.

Writer DP! Unknown 27 May 20 5 Views
ನನ್ನ ಮಾತಿನ ಹಿಂದಿನ ಮೌನ ನೀನು.
ನಗುವಿನ ಹಿಂದಿನ ದುಃಖ ನೀನು.
ಕಣ್ಣೀರ ಹನಿಯು ನೀನು.
ಹೇಳಲಾರೆನು ಕಷ್ಟ ನನದು.

ಮಾತು ಬರದಾಗಿದೆ ದಾರಿ ಕಿರಿದಾಗಿದೆ ಯಾಕೀ ವಿರಹ ನೋವು ತಾಳಲಾರದ ಜೀವ ನನದು
ಕಣ್ಣೋರೆಸಿದ ತಲೆದಿಂಬು ಮೇಲ್ಹೊದಿಕೆಗೆ  ಗೊತ್ತು, ನಾ ಬರೆದ ಕವಿತೆಗೆ  ಗೊತ್ತು, ನನ್ನ ಕಂಬನಿಗೆ ಗೊತ್ತು, ಇದು ಪ್ರೀತಿ ವಿರಹ ವೇದನೆ
ದಯವಿಟ್ಟು ಕ್ಷಮಿಸು ನನ್ನ ಹೃದಯ, ನಿನಗೆ ಸಂತಾಪ ಸೂಚಿಸುವ ಶಕ್ತಿ ಈ ಜೀವಕಿಲ್ಲ . ಅವಳು ನನ್ನ ಬಳಿ ಇಲ್ಲ...
ವಿರಹದಲ್ಲಿ ಬರೆದೆ ಈ ಕವಿತೆ ನೆನಪು ಬರುತ್ತಿಹುದು ಮತ್ತೆ ಮತ್ತೆ, ಸಾಗಿದೆ ಬಾಳಿನ ಪಯಣ ಮುಂದೆ ಸಿಗುವಿ ಎಂಬ ನೆನಪಲ್ಲಿ.
0
Reading under T&C