Kannada

ದೇವಕಿಸುತ!

Writer DP! Ganesh M 12 Apr 20 5 Views
ಸೊಂಟಕೆ ಕೊಳಲನು ತಾಕಿಸುತ
ಕೆನ್ನೆಗೆ ಗಲ್ಲವಾ ಸೋಕಿಸುತ
ಹೃದಯಕೆ ಹಚ್ಚೆಯ ಹಾಕಿಸುತ
ಬಾಹುಬಲಿ ಇಂಚಿಂಚೆ ಬಳಸುತ!

ಹೆಜ್ಜೆಗೆ ಹೆಜ್ಜೆಯಾ ಕೂಡಿಸುತ ಅಂದದಿ ಮನವ ಕಾಡಿಸುತ ನಾದಕ್ಕೆ ತಕ್ಕಂತೆ ಕುಣಿಸುತ ಬೆವರಿಸಿದ ತನುವ ದಣಿಸುತ!
ಮುಂಗುರುಳ ಮರೆಗೆ ಸರಿಸುತ ಸುಂದರಿಗೆ ಮೋಹವ ಬರಿಸುತ ಮುತ್ತಿನ ಮತ್ತನು ಸೇರಿಸುತ ಮುತ್ತಿಗೆ ಹಾಕಿದನು ಕೆರಳಿಸುತ!
ಬಾಯಲ್ಲೇ ಬ್ರಹ್ಮಾಂಡ ತೋರಿಸುತ ತೋಳಲೇ ವರಮಾಲೆ ಧರಿಸುತ ಕೈ ಮೇಲೆ ಕೈ ಇಟ್ಟು ವರಿಸುತ ಆವರಿಸಿದ ಅವನೂ ದೇವಕಿಸುತ!
ಕಣ್ಣಲ್ಲೇ ಕಣ್ಣಿಟ್ಟು ಚೇಡಿಸುತ ಚಂದದಿ ಮೊಹವ ಮೂಡಿಸುತ ಕಾಡಿ ಓಡಿದವನ ಅರಸುತ ಬಂದೆನು ಮನದಲ್ಲೇ ಹವಣಿಸುತ!
ನಲ್ಲೆಯ ನವಿರಾಗಿ ನಾಚಿಸುತ ಒಡಲ ಬೆಣ್ಣೆಯ ಕರಗಿಸುತ ಕಳೆದದ್ದು ಪಡೆದು ಮರಳಿಸುತ ಮಡಿಲ ಮೇಲೆಯೇ ಪವಡಿಸುತ!
ನವಿಲುಗರಿಯ ನೆನೆಸುತ ಅದರ ಮೊನಚನು ಸವೆಸುತ ಮುಟ್ಟದೆ ನನ್ನನ್ನು ಮಣಿಸುತ ಮಣಿದನು ಅವನನ್ನೇ ಕರುಣಿಸುತ!
ಮೆಲ್ಲಗೆ ಮೋಹವ ಮೂಡಿಸುತ ಮೋಹದಿ ಮಾಟವ ಮಾಡಿಸುತ ನನ್ನ ಸಿಂಧೂರದಿ ಶೋಭಿಸುತ ಆಕ್ರಮಿಸಿದ ಅವನು ಯಶೋದೆಸುತ!
0
Reading under T&C