Kannada

ಕೊನೆ ಎಂದು? (ನಿನ್ನ‌ ಆಸೆಗಳಿಗೆ, ನಿನ್ನ ಭಯಕ್ಕೆ)

Writer DP! ಧ್ರುವ 04 Nov 16 40 Views

ಮುಸುಕಿನ ಕೊನೆಯೇನೊ ಅದು 
ಕಾಣುತಿದೆ ಬೆಳಕಿನ ಚಿಹ್ನೆಯು 
ಹಿಂದೇನಾಗಿದೆ ಒಂದೂ ತಿಳಿಯದು
ಮುಂದೇನಾಗ ಬಹುದು ಏನೂ ಗೊತ್ತಿಲ್ಲ.


ಬೇಟೆ ನಾಯಿಗಳ ಸದ್ದು ಮೊಳಗಿತು
ಬೆಳಕಿನ ಕಡೆ ಓಟದ ಪಯಣ ಸಾಗಿತು
ಬಯಸಿದೆಲ್ಲಾ ಎಸೆದೆ ಅವಕ್ಕೆ
ಸಾಕಾಗದೆ ಹಿಂಬಿದ್ದವು ಬೆಂಬಿಡದೆ.


ದಣಿದ ದೇಹ, ಉತ್ಸಾಹವಿರದ ಮನಸು
ಭಾವನೆಗಳಿಗೆ ಮಿಡಿಯದ ಹೃದಯ
ಬೇಡವೆನಿಸಿತು‌ ಎನಗೆ ಪ್ರಾಣದ ಭಯ
ಕಣ್ಮುಚ್ಚಿ ತೆರೆಯುವ ಮುನ್ನ ಎಲ್ಲಾ ಮಾಯಾ!


ಹಿಂದಿರುಗಿದರೆ ಬೆಳಕಿನ ಭೇಟಿ
ನನ್ನದೆ‌ ಆಕೃತಿ ಪಡೆದು ಹೇಳಿದೊಂದೆ ಮಾತು
ಭಯಕ್ಕೆ‌ ಹೊರಬಾಗಿಲ ದಾರಿಯ ತೋರು
ಆಗುವುದು ಮೋಕ್ಷ ನಿನಗೆ ನಿನ್ನಿಂದಲೆ.


-ಧ್ರುವ
3
Reading under T&C