Kannada · Comedy

ಜನರೇಟರ್

Writer DP! Ramya h r 10 Sep 20 1 Views
ಮಂಡ್ಯ ಜಿಲ್ಲೆಯ ಒಂದು ಪುಟ್ಟ ಗ್ರಾಮ .ನಮ್ಮದೊಂದು ಪುಟ್ಟ ಗೂಡು .ಅಲ್ಲಿ ನಾನು, ಅಪ್ಪ ,ಅಮ್ಮ ,ಅಕ್ಕ ,ಅಣ್ಣ ,ಅಜ್ಜಿ .ಇದು ನಮ್ಮ ಪುಟ್ಟ ಸಂಸಾರ. ಮನೆಯಲ್ಲಿ ಅಜ್ಜಿ ತಾತಾ ಅಥವಾ ಹಿರಿ ಜೀವಗಳು ಇರುವುದೊಂದು ದೊಡ್ಡ ಆಸ್ತಿ. ಅದು ಈಗಿನಕಾಲದ ಮಕ್ಕಳಿಗೆ ತಿಳಿದಿದೆಯೋ ,ಇಲ್ಲವೋ ಗೊತ್ತಿಲ್ಲ ?
ಏಕೆಂದರೆ ಅವರು ನಮ್ಮೆಲ್ಲರ ವಯಸ್ಸನ್ನು ದಾಟಿ ಮುಪ್ಪಿನ ಹಂತ ತಲುಪಿರುತ್ತಾರೆ .ಆದ್ದರಿಂದ ನಮ್ಮ ಎಷ್ಟೋ ಸಮಸ್ಯೆಗಳಿಗೆ ಅವರ ಅನುಭವದ ಬತ್ತಳಿಕೆಯಲ್ಲಿ ಉತ್ತರಗಳು ಸಿಗಬಹುದು.

 ಈಗ ವಿಷಯಕ್ಕೆ ಬರೋಣ ನಮ್ಮ ಊರಿನಲ್ಲಿ ಬಟ್ಟೆ ಒಗೆಯುವುದಕ್ಕೆ ಮನೆಯಲ್ಲಿ ವಾಷಿಂಗ್ ಮೆಷಿನ್ ಇರಲಿಲ್ಲ. ಇಂದಿಗೂ ಎಷ್ಟೋ ಹಳ್ಳಿಗಳಲ್ಲಿ ಬಟ್ಟೆಗಳನ್ನು ಕೆರೆ ,ಹೊಳೆ, ನದಿ ,ನಾಲೆಗಳಲ್ಲಿ ಒಗೆಯುತ್ತಾರೆ. ಜುಳುಜುಳು ಎಂದು ಧಾರಾಳವಾಗಿ ಹರಿಯುವ ನೀರು ,ತಂಪಾದ ಗಾಳಿ ,ಈ ವಾತಾವರಣದಲ್ಲಿ ಬಟ್ಟೆ ಒಗೆಯುವುದಕ್ಕೆ ಹೋದರೆ ಮೈ ,ಮನಸ್ಸು ಬಟ್ಟೆ ಎಲ್ಲವೂ ತಿಳಿಯಾಗುತ್ತದೆ .ಹೀಗೆ ಊರಿನ ಹಲವು ಹೆಂಗಸರು ಅಲ್ಲಿ ಬಂದು ಬಟ್ಟೆ ಒಗೆಯುತ್ತತಾರೆ. ಮತ್ತು ಈ ಸ್ಥಳ ಯಾವುದೇ ವಿಧಾನಸಭಾ ಕಲಾಪ ಗಳಿಗೇನು ಕಡಿಮೆ ಇರುವುದಿಲ್ಲ . ಏಕೆಂದರೆ ಊರಿನ ಅಥವಾ ಅಕ್ಕಪಕ್ಕದವರ ಎಷ್ಟೋ ವಿಷಯಗಳು ಇಲ್ಲಿ ಪ್ರಸ್ತಾಪವಾಗುತ್ತವೆ .ಆದ್ದರಿಂದ ಎಷ್ಟೋ ಬಾರಿ ಹೆಂಗಸರಿಗೆ ಈ ಸ್ಥಳವು ಮೈಂಡ್ ರಿಲೀಫ್ ಕೂಡ ಕೊಟ್ಟಿರುತ್ತದೆ . ಹೀಗೆ ಒಂದು ದಿನ ನಾನು ಕೂಡ ಅಮ್ಮನ ಜೊತೆ ಬಟ್ಟೆ ಒಗೆಯಲು ಹೋಗಿದೆ. ಆ ಸಮಯದಲ್ಲಿ ಮನೆಯಲ್ಲಿ ಅಜ್ಜಿ ಮಾತ್ರ ಇದ್ದರೂ ಅಕ್ಕ ಅಣ್ಣ ಇಬ್ಬರೂ ಕಾಲೇಜು ಹೋಗಿದ್ದರು. ವೃತ್ತಿಪರ ಅಪ್ಪ ಒಬ್ಬ ರೈತರಾದರೂ ಅವರು ಮಾಡುತ್ತಿದ್ದಿದ್ದು ಸಾಮಿಲ್ ಕೆಲಸ.( ದೊಡ್ಡ ದೊಡ್ಡ ಮರದ ದಿಮ್ಮಿಗಳನ್ನು ನಮಗೆ ಬೇಕಾದ ಆಕಾರಕ್ಕೆ ಅನುಕೂಲಕ್ಕೆ ತಕ್ಕಂತೆ ಕೊಯ್ದು ಮಾರುವುದು). ಸಾಮಾನ್ಯವಾಗಿ ಹಳ್ಳಿಗಳಲ್ಲಿ ಹೆಚ್ಚ ವಿದ್ಯುತ್ ಶಕ್ತಿಯ ಪೂರೈಕೆ ಇರುವುದಿಲ್ಲ .ನಿಗದಿತ ಸಮಯಕ್ಕಷ್ಟೇ ವಿದ್ಯುತ್ ಶಕ್ತಿಯನ್ನು ಪೂರೈಸುತ್ತಾರೆ .ಆದ್ದರಿಂದ ಅಪ್ಪ ಸಾಮಿಲ್ ಕೆಲಸಕ್ಕಾಗಿ ಜನರೇಟರ್ ಒಂದನ್ನು ತಂದು ಅಳವಡಿಸಬೇಕು ಅಂದುಕೊಂಡಿದ್ದರು. ಅದರಂತೆ ಆ ದಿನ ಜನರೇಟರ್ ತಂದು ಇಟ್ಟಿದ್ದಾರೆ . ನಮ್ಮ ಸಂಪ್ರದಾಯದಂತೆ ಯಾವುದೇ ಹೊಸ ವಸ್ತುಗಳನ್ನು ತಂದರೆ ಅದಕ್ಕೆ ಪೂಜೆ ಮಾಡಿ ಚಾಲನೆ ನೀಡಬೇಕೆಂಬುದು ವಾಡಿಕೆ. ಅದರಲ್ಲಿಯೂ ಹೆಂಗಸರು ಮಾಡಿದರೆ ಶ್ರೇಷ್ಠ ಎನ್ನುವುದು ಅಪ್ಪ ನಾ ನಂಬಿಕೆ . ಅದರಂತೆಯೇ ಜೆನರೇಟರ್ ಗೆ ಪೂಜೆ ಮಾಡಲು ನಮ್ಮನ್ನು ಕರೆಯಲು ಅಪ್ಪ ಮನೆಗೆ ಬಂದಿದ್ದಾರೆ. ಆ ಸಮಯದಲ್ಲಿ ನಾನು ಅಮ್ಮ ಬಟ್ಟೆ ಒಗೆಯಲು ಹೋಗಿದ್ದೆವು .ಆದ್ದರಿಂದ ಅಜ್ಜಿಯ ಬಳಿ ನಾನು ಜನರೇಟರ್ ತಂದಿದ್ದೇನೆ ಅದರ ಪೂಜೆಗೆ ಅವರಿಬ್ಬರನ್ನು ಬರಲು ಹೇಳು ಎಂದು ಹೇಳಿ ಟ್ಟು ಹೋಗಿದ್ದಾರೆ .ನಾವಿಬ್ಬರೂ ಮನೆಗೆ ಬಂದ ತಕ್ಷಣ ಅಜ್ಜಿ ನನ್ನನ್ನು ಕರೆದು ನಿಮ್ಮಪ್ಪ ಇವತ್ತು "ಜನವರಿ ಲೈಟ್ "ತಂದಿದ್ದಾರಂತೆ ಅದರ ಪೂಜೆ ಮಾಡಲು ಹೋಗಬೇಕಂತೆ ಎಂದು ಹೇಳಿದ್ದರು .ಮೊದಲೇ ಬಟ್ಟೆ ಒಗೆದು, ಬಿಸಿಲಿನಲ್ಲಿ ಬಟ್ಟೆ ಹೊತ್ತುಕೊಂಡು ಮನೆತನಕ ಬಂದ ನಾನು ,ಅಮ್ಮ ಇಬ್ಬರು ತುಂಬಾ ದಣಿದಿದ್ದೆವು .ಮತ್ತು ಜನವರಿ ಲೈಟ್ ಏನು ಎಂಬುದು ನಮ್ಮಿಬ್ಬರಿಗೂ ಹೊಳೆಯಲಿಲ್ಲ .ಆದ್ದರಿಂದ ಅಜ್ಜಿ ಯಾವುದೋ ಲೈಟ್ ಬಿಲ್ ಬಗ್ಗೆ ಮಾತಾಡುತ್ತಿದ್ದಾರೆ ಎಂದು ಅವರ ಮಾತನ್ನು ನಿರ್ಲಕ್ಷಿಸಿ, ನಾವಿಬ್ಬರೂ ಅಲ್ಲಿಯೇ ವಿಶ್ರಮಿಸಬೇಕು ಎಂದು ತೀರ್ಮಾನಿಸಿದವು .ನಂತರ ಹಾಗೆಯೇ ಇಬ್ಬರು ಮಲಗಿ ನಿದ್ದೆ ಮಾಡಿದ್ದು ಆಯಿತು. ಯಾರೊಬ್ಬರೂ ಅಲ್ಲಿ ಬರದ ಕಾರಣ ಸಿಟ್ಟಿಗೆದ್ದ ಅಪ್ಪ ತಾನೇ ಎಲ್ಲ ಪೂಜೆ ಮುಗಿಸಿ ಮನೆಗೆ ಬಂದರೂ ಮನೆಗೆ ಬಂದ ಅಪ್ಪನ ಮುಖ ತುಂಬಾ ಕೋಪದಿಂದ ಕೂಡಿತ್ತು . ಸಿಟ್ಟಿಗೆದ್ದ ಅಪ್ಪ ,ಯಾಕೆ ಯಾರೂ ಬರಲಿಲ್ಲ? ನಾನು ಜನರೇಟರ್ ತಂದು ಪೂಜೆ ಮಾಡಲು ನಿಮಗಾಗಿ ಕಾಯುತ್ತಿದೆ .ಎಂದು ಹೇಳಿದ್ದರು. ಅಮ್ಮ ಆಶ್ಚರ್ಯದಿಂದ ಇನ್ನೊಂದು ಸಾರಿ, ಏನಂದಿರಿ !ಎಂದು ಕೇಳಿದರು ಆಗ ಅಪ್ಪ ಜನರೇಟರ್ ತಂದಿದ್ದೇನೆ. ಎಂದರು ಅದರ ಪೂಜೆಗೆಂದೇ ನಿಮ್ಮನ್ನು ಬರಲು ಹೇಳಿದ್ದೆ .ನೀವ್ಯಾರೂ ಅಲ್ಲಿಗೆ ಬರಲಿಲ್ಲ ಎಂದು ಅಪ್ಪ ಸಿಟ್ಟಿನಿಂದ ಹೇಳಿದರು .ನನಗೂ ಅಮ್ಮನಿಗೂ ತಡೆಯಲಾರದಷ್ಟು ನಗು ಬಂದಿತ್ತು .ಇಬ್ಬರೂ ಜೋರಾಗಿ ಹೊಟ್ಟೆ ಹುಣ್ಣಾಗುವಷ್ಟು ನಗುತ್ತಿದ್ದದೆವು, ಈಗ ಅಪ್ಪನಿಗೆ ಸಿಟ್ಟು ನೆತ್ತಿಗೇರಿತ್ತು .ಒಂದು ಸಾರಿ ಜೋರಾಗಿ ಗದರಿದರು.ಬಾಯಿ ಮುಚ್ಚಿ ,ನನ್ನ ಮಾತಿಗೆ ಏಕೆ ನಗುತ್ತಿದ್ದೀರಿ ? ಎಂದು ಕೇಳಿದರು ಆಗ ಅಮ್ಮ ಹೇಗೋ ನಗು ತಡೆದುಕೊಂಡು ನಿಮ್ಮಮ್ಮ ನಮಗೆ ನೀವು ಯಾವುದೋ ಜನವರಿ ಲೈಟ್ ತಂದಿದ್ದೀರಿ ಎಂದು ಹೇಳಿದರೂ ನಿಜವಾಗಲೂ ಅದು ಜನರೇಟರ್ ಎಂದು ಅರ್ಥವಾಗದೆ ನಾವಲ್ಲಿಗೆ ಬರಲಿಲ್ಲ ಎಂದು ಹೇಳಿದ್ದರೂ .ಈಗ ಹೊಟ್ಟೆ ಉಣ್ಣಣಾಗುವಷ್ಟು ನಗುವ ಸರದಿ ಅಪ್ಪನ ದಾಗಿತ್ತು .
0
Reading under T&C