Kannada · True Story ಲಕ್ಕಿಯ SSLC ಪರೀಕ್ಷೆ Bharavi Bharadwaja 25 Apr 20 4 Views ಒಂದು ಮುಂಜಾನೆ ಗೆಳೆಯನ ಜೊತೆ ಸಡ್ ಸಡನ್ ಆಗಿ "ಜೈಪುರ್" ಗೆ ಹೋಗೊ ಹಾಗೆ ಆಯಿತು. ಬೆಳಗ್ಗೆ ೬ ಗಂಟೆಗೆ ವಿಮಾನ ಹತ್ತಿ ಸುಮಾರು ೮.೩೦ ರ ವೇಳೆಗೆ ಜೈಪುರ್ ತಲುಪಿದ್ದು ಆಯಿತು. ಹೊರಗೆ ಬಂದ ತಕ್ಷಣ ಒಂದು ಚಾಯ್ (ಕೆಮ್ಮಣ್ಣಿನ ಲೋಟದಲ್ಲಿ ಚಾಯ್ ಕುಡಿಯೋ ಖುಷಿ Express ಮಾಡಲು ಅಸಾಧ್ಯ). ಅಲ್ಲಿಂದ ಹೋಟೆಲ್ ಕಡೆಗೆ ಪಯಣ ಮಾಡುವ ಒಂದು ದಿಟ್ಟ ನಿರ್ಧಾರ ಮಾಡಿ uber, ola ದರಗಳನ್ನು ಹುಡುಕಿ, ಕೆದಕಿ, ಬೆದ್ಕಿ ಇದ್ಯಾವು ವರ್ಕೌಟ್ ಆಗ್ತಾ ಇಲ್ಲ ಅಂತ ಆಟೋ ಸ್ಟ್ಯಾಂಡ್ ಕಡೆ ಮುಖ ಮಾಡಿದೆವು. ಆಟೋ ಪದದಲ್ಲಿ "ಆ" ಹೇಳಿ "ಟೋ" ಹೇಳೋ ಅಷ್ಟರಲ್ಲಿ ಒಂದಷ್ಟು ಜನ ಜೇಬಿದೆ ಕತ್ರಿ, ಚಾಕು, razer, blade, ಮಚ್ಚು, ಲಾಂಗು ಹಾಕಕ್ ಬಂದೆ ಬಿಟ್ರು. ಅವರನ್ನೆಲ್ಲ ಮಾತಲ್ಲೇ ಹೊಡೆದು, ಬಡಿದು ಯುದ್ಧ ಗೆದ್ವಿ ಅನ್ನೋ ಸಂಭ್ರಮವನ್ನು ಆಚರಣೆ ಮಾಡ್ತಾ ಇದ್ವಿ. ಅಷ್ಟರಲ್ಲಿ ಅದೆಲ್ಲಿಂದನೋ ಒಬ್ಬ ಬಂದ ನೋಡಿ. ಅದೇನೋ ಒಂಥರಾ ಮಾತಿನ ವರಸೆ, ಅದೇನೋ ಸಾಧಿಸಬೇಕು ಅನ್ನೋ ಛಲ, ಬರೀ ಸುಲಿಗೆ ಮಾಡೋ ಜನರಲ್ಲಿ ಇವನು ಒಳ್ಳೆಯವ ಅನ್ನೋ ಫೀಲಿಂಗ್ಸ್ ಬಂದೆ ಬಿಡ್ತು. ಫೀಲಿಂಗ್ಸ್ ಬಂದ್ ಆದ್ಮೇಲೆ ಇನ್ನೇನಿಕ್ ತಡ ಅಂತ ಆಟೋ ಹತ್ತಿ ಕೂತಿದ್ದೆ ಮುಲಾಜು ಇಲ್ಲದೆ. ಮಾತಾಡ್ತಾ ಮಾತಾಡ್ತಾ ಅವನ ಮಾತಿನ ಶೈಲಿ ಕೊಂಚ ಹಿಡಿಸುತ್ತ ಹೋಯಿತು. ಅವನು ಫೋನ್ ಇಡಲು ಬಳಸುತ್ತಿದ್ದ holder, ಅವನ ಫೋನಿನ ringtone ಅಂತೂ ಬಾರಿ ಮಜ ಮಜ ಇತ್ತು. 200 (for two people) ರೂಪಾಯಿ ಬಾಡಿಗೆ ಮಾತಾಡಿದ ಅವನು,ನಡು ದಾರಿಯಲ್ಲಿ ಇನ್ನೊಬ್ಬ ಪ್ರಯಾಣಿಕನ ಮನವೊಲಿಸಿ ಅವನ ಹತ್ತಿರ 150 ರೂಪಾಯಿ ಬಾಡಿಗೆ ಮಾತಾಡಿದ ರೀತಿ ಬಲು ಸೊಗಸು. 150 ರೂಪಾಯಿ ಬಾಡಿಗೆ ಮಾತಾಡಿದ ತಕ್ಷಣ ಅವನ ಹೆಸರು ಕೇಳೋ ಮನಸ್ಸಾಯಿತು ನನಗೆ. ಅವನ ಹೆಸರು ಕೇಳಿದ ತಕ್ಷಣ ನನಗೆ ಅನಿಸಿದ್ದು, yes he is really lucky anta. ಇವತ್ತಿನ ನನ್ನ ಈ ಕಥೆಯ ನಾಯಕನ ಹೆಸರು "ದಿಲ್ ಲಕ್ಕಿ" ನಮ್ಮ ಈ ದಿಲ್ ಲಕ್ಕಿ SSLC ಪರೀಕ್ಷೆಗೆ ತಯಾರಿ ನಡೆಸುತ್ತಿದ್ದು ಅವರಿಗೆ ಶುಭವಾಗಲಿ ಎಂದು ಎಲ್ಲರೂ ಹಾರೈಸೋಣ 0 Must Read Sign in to vote. Sign In Reading under T&C